ನಾಲ್ಕನೇ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಕೆಲವು ಅಂಕಿ-ಅಂಶಗಳು
ಬೆಂಗಳೂರು(ಸೆ.29): ಸತತ 9 ಏಕದಿನ ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ಪಡೆಯ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದು ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್'ಗಳ ಅಂತರದಲ್ಲಿ ಶರಣಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ತಮ್ಮ 100ನೇ ಏಕದಿನ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ನಾಲ್ಕನೇ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಕೆಲವು ಅಂಕಿ-ಅಂಶಗಳು
- ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಇದೀಗ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 50 ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
- 1. ಹಾರ್ದಿಕ್ ಪಾಂಡ್ಯ ತಾನಾಡಿದ ಮೊದಲ 25 ಪಂದ್ಯಗಳಲ್ಲಿ 25 ವಿಕೆಟ್ ಹಾಗೂ 500 ರನ್ ಬಾರಿಸಿದ ಟೀಂ ಇಂಡಿಯಾದ ಮೊದಲ ಹಾಗೂ ವಿಶ್ವ ಕ್ರಿಕೆಟ್'ನಲ್ಲಿ ಒಟ್ಟಾರೆ 11ನೇ ಆಟಗಾರ ಎನಿಸಿಕೊಂಡರು.
- 6. ಇದು ಆರನೇ ಬಾರಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಟ್ಟಿಗೆ ಕ್ರೀಸ್'ನಲ್ಲಿದ್ದಾಗ ರನೌಟ್ ಆಗಿದ್ದಾರೆ. ಇದರಲ್ಲಿ ಕೊಹ್ಲಿ 4 ಬಾರಿ ಔಟ್ ಆದರೆ, ರೋಹಿತ್ 2 ಬಾರಿ ಪೆವಿಲಿಯನ್ ಸೇರಿದ್ದಾರೆ.
- 100ನೇ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 8ನೇ ಆಟಗಾರ ಎನ್ನುವ ಗೌರವಕ್ಕೆ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ. ಅಲ್ಲದೇ 100ನೇ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ ಆಸೀಸ್ ಆಟಗಾರ ಎನ್ನುವ ಶ್ರೇಯವೂ ವಾರ್ನರ್ ಪಾಲಾಯಿತು.
- ಆಸ್ಟ್ರೇಲಿಯಾ ತವರಿನಾಚೆ ಸರಿಸುಮಾರು ಒಂದು ವರ್ಷಗಳ ಬಳಿಕ ಏಕದಿನ ಕ್ರಿಕೆಟ್'ನಲ್ಲಿ ಸವಿ ಸವಿದಿದೆ. ಒಟ್ಟು 13 ಪಂದ್ಯಗಳ ಬಳಿಕ ಆಸೀಸ್ ಪಡೆ ಗೆಲುವು ಕಂಡು ನಿಟ್ಟುಸಿರು ಬಿಟ್ಟಿತು.
- ಸ್ಟೀವ್ ಸ್ಮಿತ್ ಔಟ್ ಮಾಡುವುದರೊಂದಿಗೆ ಉಮೇಶ್ ಯಾದವ್ 100 ವಿಕೆಟ್ ಕಿತ್ತ ಸಾಧನೆ ಮಾಡಿದರು. ಉಮೇಶ್ ಯಾದವ್ ಈ ಸಾಧನೆ ಮಾಡಿದ ಭಾರತದ 18ನೇ ಆಟಗಾರರೆನಿಸಿದರು.
- 2017ನೇ ಸಾಲಿನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ(28 ಸಿಕ್ಸ್) ಹಾರ್ದಿಕ್ ಪಾಂಡ್ಯ ಪಾಲಾಯಿತು. ಇದಕ್ಕೂ ಈ ದಾಖಲೆ ಇಯಾನ್ ಮಾರ್ಗನ್(26 ಸಿಕ್ಸ್) ಹೆಸರಿನಲ್ಲಿತ್ತು.
