1000 ಕೋಟಿ ರೂಪಾಯಿ ಕ್ಲಬ್ ಸೇರಲಿದ್ದಾರೆ ಕೊಹ್ಲಿ-ಅನುಷ್ಕಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 10:07 PM IST
Virat kohli and Anushka Sharma Net worth Will reach thousand crores soon
Highlights

ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಬಾಲಿವುಡ್‌ನ ಬಹುಬೇಡಿಕೆ ನಟಿ. ಇದೀಗ ಇವರಿಬ್ಬರ ನಿವ್ವಳ ಮೊತ್ತ ಸಾವಿರ ಕೋಟಿ ತಲುಪುತ್ತಿದೆ. ಇಲ್ಲಿದೆ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆದಾಯದ ವಿವರ.

ಮುಂಬೈ(ಆ.10): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅತ್ಯಂತ ಜನಪ್ರೀಯ ಜೋಡಿ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ.

ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದ ಶ್ರೀಮಂಕ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಇತ್ತ ಅನುಷ್ಕಾ ಕೂಡ ಬಾಲಿವುಡ್‌ನಲ್ಲಿ ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಇದೀಗ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯ ನಿವ್ವಳ ಮೊತ್ತ (ನೆಟ್ ವರ್ಥ್) ಶೀಘ್ರದಲ್ಲೇ 1000 ಕೋಟಿ ತಲುಪಲಿದೆ.

ವಿರಾಟ್ ಕೊಹ್ಲಿ ಸಂಭಾವನೆ, ಪ್ರಶಸ್ತಿ ಮೊತ್ತ, ಎಂಡೋರ್ಸ್‌ಮೆಂಟ್ ಸೇರಿ ಒಟ್ಟು 382 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.  ಅನುಷ್ಕಾ ಶರ್ಮಾ ನಟನೆ ಹಾಗೂ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಒಟ್ಟು 220 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಇವರಿಬ್ಬರ ಒಟ್ಟು ನಿವ್ವಳ ಮೊತ್ತ 602 ಕೋಟಿ ರೂಪಾಯಿ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯ ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 600 ಕೋಟಿ.  ಹೀಗಾಗಿ ವಿರುಷ್ಕಾ ಜೋಡಿಯ ನಿವ್ವಳ ಮೊತ್ತ ಇನ್ನೆರಡು ವರ್ಷದಲ್ಲಿ ಸಾವಿರ ಕೋಟಿ ಕ್ಲಬ್ ಸೇರಲಿದೆ ಎಂದು ಪರ್ಸೆಪ್ಟ್ ಪ್ರೊಫೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ಸಿಂಗ್ ಹೇಳಿದ್ದಾರೆ.

loader