ಕಳೆದ ವರ್ಷ ಇಲ್ಲಿನ ವೊರ್ಲಿಯಲ್ಲಿ ವಿರಾಟ್-ಅನುಷ್ಕಾ ಬರೋಬ್ಬರಿ ₹34 ಕೋಟಿ ನೀಡಿ ಮನೆ ಖರೀದಿಸಿದ್ದರು. ನೋಡಲು ಚಿಕ್ಕ ಅರಮನೆಯಂತೆ ಕಾಣುವ ಭಾವಚಿತ್ರವೊಂದನ್ನು ಟ್ವೀಟರ್‌'ನಲ್ಲಿ ಹಂಚಿಕೊಂಡಿರುವ ವಿರಾಟ್, ‘ಮನೆಯಿಂದ ಹೊರ ನೋಡಿದರೆ ದೃಶ್ಯ ಇಷ್ಟೊಂದು ಸುಂದರವಾಗಿರಬೇಕಾದರೆ, ಬೇರೆಲ್ಲಿ ಇರಬೇಕೆಂದು ಬಯಸಲು ಸಾಧ್ಯ’ ಎಂದು ಬರೆದಿದ್ದಾರೆ.

ಮುಂಬೈ(ಮಾ.09): ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನ ತಮ್ಮ ನೂತನ ಗೃಹ ಪ್ರವೇಶಿಸಿದ್ದಾರೆ.

ಕಳೆದ ವರ್ಷ ಇಲ್ಲಿನ ವೊರ್ಲಿಯಲ್ಲಿ ವಿರಾಟ್-ಅನುಷ್ಕಾ ಬರೋಬ್ಬರಿ ₹34 ಕೋಟಿ ನೀಡಿ ಮನೆ ಖರೀದಿಸಿದ್ದರು. ನೋಡಲು ಚಿಕ್ಕ ಅರಮನೆಯಂತೆ ಕಾಣುವ ಭಾವಚಿತ್ರವೊಂದನ್ನು ಟ್ವೀಟರ್‌'ನಲ್ಲಿ ಹಂಚಿಕೊಂಡಿರುವ ವಿರಾಟ್, ‘ಮನೆಯಿಂದ ಹೊರ ನೋಡಿದರೆ ದೃಶ್ಯ ಇಷ್ಟೊಂದು ಸುಂದರವಾಗಿರಬೇಕಾದರೆ, ಬೇರೆಲ್ಲಿ ಇರಬೇಕೆಂದು ಬಯಸಲು ಸಾಧ್ಯ’ ಎಂದು ಬರೆದಿದ್ದಾರೆ.

Scroll to load tweet…

ಪ್ರಸ್ತತ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸದಲ್ಲಿದ್ದು, ನಾಯಕ ಕೊಹ್ಲಿ ವಿಶ್ರಾಂತಿ ಪಡೆಯುವ ಸಲುವಾಗಿ ಭಾರತದಲ್ಲೇ ಉಳಿದಿದ್ದಾರೆ. ಅನುಷ್ಕಾ ವಿವಾಹದ ಬಳಿಕ ತೆರೆ ಕಂಡ ಅವರ ಅಭಿನಯದ 'ಪರಿ' ಚಿತ್ರವನ್ನು ವಿರಾಟ್ ಹಾಗೂ ಅವರ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ವಿಶೇಷ ಸ್ಕ್ರೀನಿಂಗ್'ನಲ್ಲಿ ವೀಕ್ಷಿಸಿದ್ದರು.