ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ, ಜಡ್ಡುಗೆ ವಿನೂತನವಾಗಿ ಶುಭಕೋರಿದ್ದು ಹೀಗೆ...
ನವದೆಹಲಿ(ಆ.08): ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಚೊಚ್ಚಲ ಬಾರಿಗೆ ಐಸಿಸಿ ಬಿಡುಗಡೆ ಮಾಡಿದ ಆಲ್ರೌಂಡರ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಮ್'ಮೇಟ್ ಅಜಿಂಕ್ಯ ರಹಾನೆ ಜಡ್ಡುಗೆ ವಿನೂತನವಾಗಿ ಶುಭ ಹಾರೈಸಿದ್ದಾರೆ.
ಬಾಂಗ್ಲಾದೇಶದ ಖ್ಯಾತ ಆಲ್ರೌಂಡರ್ ಶಕೀಬ್ ಅಲ್ ಹಸನ್(431 ಅಂಕ) ಹಿಂದಿಕ್ಕಿ ರವೀಂದ್ರ ಜಡೇಜಾ 438 ರನ್ ಕಲೆಹಾಕಿದ್ದಾರೆ. ಇನ್ನು ಭಾರತದ ಮತ್ತೋರ್ವ ಆಟಗಾರ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿ ಸ್ಥಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ, ಜಡ್ಡುಗೆ ವಿನೂತನವಾಗಿ ಶುಭಕೋರಿದ್ದು ಹೀಗೆ...
