ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ದ ವೇಳೆ ಕೊಹ್ಲಿ ಚೆಂಡಿಗೆ ಬೇಕೆಂದೆ ಬಾಯಿಂದ ಮಿಂಟ್ ತೆಗೆದು ಹಾಕಿ ತಮ್ಮ ಬಟ್ಟೆಗೆ ವರೆಸಿಕೊಂಡಿರುವುದು ಕ್ಯಾಮರೆದಲ್ಲಿ ಸೆರೆಯಾಗಿದೆ.
ನವದೆಹಲಿ(ನ.23): ಮೊನ್ನೆ ನಡೆದ ಆಸೀಸ್-ಆಫ್ರಿಕಾ 2ನೇ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ನಾಯಕ ಫಾಡುಪ್ಲಿಸ್ ಮೈದಾನದಲ್ಲಿ ಚೆಂಡು ವಿರೂಪಗೊಳಿಸಿದ್ದ ಆರೋಪಕ್ಕೆ ಗುರಿಯಾದ ನೆನಪು ಮಾಸುವ ಮುನ್ನವೇ ಟೀಮ್ ಇಂಡಿಯಾ ನಾಯಕನ ವಿರುದ್ಧವೂ ಇಂತಹುದೇ ಆರೋಪ ಬಲವಾಗಿ ಕೇಳಿಬಂದಿದೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ 4ನೇ ದಿನದಾಟದಲ್ಲಿ ಫಾಡುಪ್ಲಿಸ್ ಚೆಂಡನ್ನು ವಿರೂಪಗೊಳಿಸಿದ್ದು ಕ್ಯಾಮೆರದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆಯಲ್ಲಿ ಒಂದು ಪಂದ್ಯದ ನಿಷೇಧ ಸಾಧ್ಯತೆ ಇತ್ತಾದರು ದಂಡ ಕಟ್ಟಿ ಶಿಕ್ಷೆಯಿಂದ ನುಣಿಚಿಕೊಂಡಿದ್ದರು.
ಸದ್ಯ ಟೀಮ್ ಇಂಡಿಯಾ ನಾಯಕ ಕೊಹ್ಲಿ ಸಹ ಇಂತದೂ ಆರೋಪದಲ್ಲಿ ಸಿಲುಕಿದ್ದು, ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ದ ವೇಳೆ ಕೊಹ್ಲಿ ಚೆಂಡಿಗೆ ಬೇಕೆಂದೆ ಬಾಯಿಂದ ಮಿಂಟ್ ತೆಗೆದು ಹಾಕಿ ತಮ್ಮ ಬಟ್ಟೆಗೆ ವರೆಸಿಕೊಂಡಿರುವುದು ಕ್ಯಾಮರೆದಲ್ಲಿ ಸೆರೆಯಾಗಿದೆ.
ಆದರೆ ಇದುವರೆಗೂ ಅಧಿಕೃತವಾಗಿ ಯಾವುದೇ ದೂರು ಕೇಳಿಬಂದಿಲ್ಲವಾದರು, ಕೊಹ್ಲಿ ಚೆಂಡನ್ನು ವಿರೂಪಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
