45 ವರ್ಷಗಳ ಹಿಂದೆ ಭಾರತದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಒಂದೇ ಸೀರಿಸ್`ನಲ್ಲಿ 774 ರನ್ ಸಿಡಿಸಿದ್ದರು. ಅಂದಿನಿಂದ ಇದುವರೆಗೂ ಯಾರಿಂದಲೂ ಆ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. 1971ರಲ್ಲಿ ಟೆಸ್ಟ್ ಕ್ರಿಕೆಟ್`ಗೆ ಪಾದಾರ್ಫನೆ ಮಾಡಿದ ವರ್ಷವೇ ಗವಾಸ್ಕರ್ ಈ ದಾಖಲೆ ನಿರ್ಮಿಸ್ದು ವಿಶೇಷ. 1978ರಲ್ಲಿ ತನ್ನ ದಾಖಲೆಯನ್ನ ತಾನೇ ಮುರಿಯಲು ಗವಾಸ್ಕರ್ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 732 ರನ್`ಗಳನ್ನಷ್ಟೇ ಗಳಿಸಿದ್ದರು.
ಮುಂಬೈ(ಡಿ.14): ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲ ದಾಖಲೆಗಳನ್ನ ಪುಡಿಗಟ್ಟಿ ಮುನ್ನುತ್ತಿರುವ ಸುದ್ದಿ ಹೊಸದೇನಲ್ಲ. ಟೆಸ್ಟ್, ಏಕದಿನ ಯಾವುದಾದರೂ ಸರಿ. ಕೊಹ್ಲಿಗೆ ವಿಶ್ವದಲ್ಲಿ ಸಾಟಿಯೇ ಇಲ್ಲ. ಇದೀಗ, ೀ ಬ್ಯಾಟಿಂಗ್ ದೈತ್ಯ ಮಗದೊಂದು ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ.
45 ವರ್ಷಗಳ ಹಿಂದೆ ಭಾರತದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಒಂದೇ ಸೀರಿಸ್`ನಲ್ಲಿ 774 ರನ್ ಸಿಡಿಸಿದ್ದರು. ಅಂದಿನಿಂದ ಇದುವರೆಗೂ ಯಾರಿಂದಲೂ ಆ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. 1971ರಲ್ಲಿ ಟೆಸ್ಟ್ ಕ್ರಿಕೆಟ್`ಗೆ ಪಾದಾರ್ಫನೆ ಮಾಡಿದ ವರ್ಷವೇ ಗವಾಸ್ಕರ್ ಈ ದಾಖಲೆ ನಿರ್ಮಿಸ್ದು ವಿಶೇಷ. 1978ರಲ್ಲಿ ತನ್ನ ದಾಖಲೆಯನ್ನ ತಾನೇ ಮುರಿಯಲು ಗವಾಸ್ಕರ್ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 732 ರನ್`ಗಳನ್ನಷ್ಟೇ ಗಳಿಸಿದ್ದರು.
ಆದರೆ, 45 ವರ್ಷಗಳ ಬಳಿಕ ದಾಖಲೆ ಪುಡಿಗಟ್ಟುವ ಸಾಧ್ಯತೆ ಕಂಡುಬರುತ್ತಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಟೆಸ್ಟ್`ಗಳ ಸರಣಿಯಲ್ಲಿ 4 ಪಂದ್ಯ ಮುಗಿದಿದ್ದು, ಕೊಹ್ಲಿ ಈಗಾಗಲೇ 639 ರನ್ ಸಿಡಿಸಿದ್ಧಾರೆ. ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಕೊಹ್ಲಿ 135 ರನ್ ಗಳಿಸಿದರೆ ಗವಾಸ್ಕರ್ ದಾಖಲೆ ಮುರಿಯುತ್ತಾರೆ.
ಈ ಮಾತನ್ನ ಸ್ವತಃ ಗವಾಸ್ಕರ್ ಅವರ ಬಾಲ್ಯದ ಕೋಚ್ ಆಗಿದ್ದ ರಾಜಕುಮಾರ್ ಶರ್ಮಾ ಹೇಳಿದ್ದಾರೆ. ಕೊಹ್ಲಿ ಯಾವತ್ತೂ ದಾಖಲೆಗಾಗಿ ಆಡುವುದಿಲ್ಲ. ಈ ದಾಖಲೆ ಬಗ್ಗೆ ಅವನಿಗೆ ಗೊತ್ತಿರುವುದೂ ಇಲ್ಲ. ಆದರೆ, ಹೀಗಿರುವ ಫಾರ್ಮ್`ನಲ್ಲಿ ವಿರಾಟ್ ಕೊಹ್ಲಿಗೆ ಈ ದಾಖಲೆ ಮುರಿಯುವ ಸುವರ್ಣಾವಕಾಶ ಸಿಕ್ಕಿದೆ ಎಂದು ಶರ್ಮಾ ಹೇಳಿದ್ದಾರೆ.