‘ಸಚಿನ್ ಅಂಗಳದಲ್ಲಿ ಜೈ ಇದ್ದಂತೆ ಮತ್ತು ಅಂಗಳದ ಹೊರಗೆ ನಾನು ವೀರೂ ಇದ್ದಂತೆ’ ಎಂದು ತಮ್ಮ ಬಾಲ್ಯದ ದಿನಗಳ ಫೋಟೋವೊಂದನ್ನು ಟ್ವೀಟ್ ಕಾಂಬ್ಳಿ ಮಾಡಿದ್ದಾರೆ.
ನವದೆಹಲಿ(ಆ.06]: ಸ್ನೇಹಿತರ ದಿನದ ನಿಮಿತ್ತ ಕ್ರಿಕೆಟ್ ದಿಗ್ಗಜ, ತಮ್ಮ ಬಾಲ್ಯದ ಸ್ನೇಹಿತ ಸಚಿನ್ ತೆಂಡುಲ್ಕರ್'ಗೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿಶಿಷ್ಟ ರೀತಿಯಲ್ಲಿ ಶುಭ ಕೋರಿದ್ದಾರೆ.
ಜನಪ್ರಿಯ ಚಲನಚಿತ್ರ ‘ಶೋಲೆ’ಯಲ್ಲಿ ಬರುವ ಜೈ ಮತ್ತು ವೀರೂ ಪಾತ್ರಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ‘ಸಚಿನ್ ಅಂಗಳದಲ್ಲಿ ಜೈ ಇದ್ದಂತೆ ಮತ್ತು ಅಂಗಳದ ಹೊರಗೆ ನಾನು ವೀರೂ ಇದ್ದಂತೆ’ ಎಂದು ತಮ್ಮ ಬಾಲ್ಯದ ದಿನಗಳ ಫೋಟೋವೊಂದನ್ನು ಟ್ವೀಟ್ ಕಾಂಬ್ಳಿ ಮಾಡಿದ್ದಾರೆ.
ಇದೇ ವೇಳೆ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರೂ ಜತೆಗಿರುವ ಫೋಟೋ ಟ್ವೀಟ್ ಮಾಡಿ ಶುಭ ಹಾರೈಸಿದೆ.
ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ‘ವಿಶ್ವದಲ್ಲಿ ಗೆಳೆತನ ಅತ್ಯಂತ ಶ್ರೇಷ್ಠ ಸಂಬಂಧ’ ಎಂದು ತಮ್ಮ ಇನ್‌ಸ್ಟಾಗ್ರಾಮ್'ನಲ್ಲಿ ಬರೆದುಕೊಂಡಿದ್ದಾರೆ. ರೋಹಿತ್ ಶರ್ಮಾ,
‘ನಾನು ಗೆಳೆತನದಿಂದ ಬಹಳಷ್ಟನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ
