ಕೋಚ್ ಸ್ಥಾನದ ರೇಸ್‌ನಲ್ಲಿದ್ದ ರಾಜಸ್ಥಾನ ಕ್ರಿಕೆಟಿಗ ಪ್ರದೀಪ್ ಸುಂದರಮ್ ಮತ್ತು ಭಾರತ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪವಾರ್‌ರನ್ನು ಮುಂಬೈನ ಸಮಂತ್ ಹಿಂದಿಕ್ಕಿದ್ದಾರೆ. ಮುಂಬೈ ಕ್ರಿಕೆಟ್ ಮಂಡಳಿಯಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 

ಮುಂಬೈ(ಜು.13]: ಮುಂಬೈ ರಣಜಿ ತಂಡಕ್ಕೆ ಮಾಜಿ ಆಟಗಾರ ವಿನಾಯಕ ಸಮಂತ್ ಹಾಗೂ 19 ವರ್ಷದೊಳಗಿನವರ ತಂಡಕ್ಕೆ ವಿಕಿನ್ ಮೋಟಾ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಪ್ರಕಟಿಸಿದ್ದಾರೆ.

ಕೋಚ್ ಸ್ಥಾನದ ರೇಸ್‌ನಲ್ಲಿದ್ದ ರಾಜಸ್ಥಾನ ಕ್ರಿಕೆಟಿಗ ಪ್ರದೀಪ್ ಸುಂದರಮ್ ಮತ್ತು ಭಾರತ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪವಾರ್‌ರನ್ನು ಮುಂಬೈನ ಸಮಂತ್ ಹಿಂದಿಕ್ಕಿದ್ದಾರೆ. ಮುಂಬೈ ಕ್ರಿಕೆಟ್ ಮಂಡಳಿಯಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 

ಸಮಂತ್, ಒಟ್ಟು 101 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿದ್ದು, 3496 ರನ್‌ಗಳಿಸಿದ್ದಾರೆ. ಈ ಮೊದಲು ಕೋಚ್ ಸಮೀರ್ ಧಿಗೆ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು.