Asianet Suvarna News Asianet Suvarna News

ವಿಜೇಂದರ್'ಗೆ ಸಾಟಿಯಾಗದ ಚೆಕಾ; ಏಷ್ಯಾ ಪೆಸಿಫಿಕ್ ಪಟ್ಟ ಉಳಿಸಿಕೊಂಡ ಭಾರತೀಯ ಬಾಕ್ಸರ್

ಮಣ್ಣುಮುಕ್ಕಿಸುತ್ತೇನೆಂದು ಕೊಚ್ಚಿಕೊಂಡಿದ್ದ ಭಾರೀ ಅನುಭವಿ ಬಾಕ್ಸರ್'ಗೆ ನಾಕೌಟ್ ಪಂಚ್ ಕೊಟ್ಟ ವಿಜೇಂದರ್

vijender singh retains asia pacific pro boxing title

ನವ​ದೆ​ಹ​ಲಿ: ‘‘ರಿಂಗ್‌ನ ಆಚೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಏಕೆಂದರೆ, ರಿಂಗ್‌ನೊಳಗೆ ನನ್ನ ಪಂಚ್‌ಗಳೇ ನಾನು ಹೇಳದ್ದೆಲ್ಲವನ್ನೂ ಮಾರ್ದನಿಸುತ್ತವೆ.'' - ಅನುಭವಿ ಬಾಕ್ಸರ್‌ ಫ್ರಾನ್ಸಿಸ್‌ ಚೆಕಾ ವಿರುದ್ಧ 3-0 ಅಂತರದಿಂದ ಗೆಲುವು ಪಡೆದು ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಗೆದ್ದ ಭಾರತದ ವೃತ್ತಿಪರ ಬಾಕ್ಸರ್‌ ವಿಜೇಂ ದರ್‌ ಸಿಂಗ್‌ ಆಡಿದ ನುಡಿಗಳಿವು. 

ಇಲ್ಲಿನ ತ್ಯಾಗ​ರಾಜ ಒಳಾಂಗಣ ಕ್ರೀಡಾಂಗ​ಣ​ದಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ವಿಜೇಂದರ್‌ ಸಿಂಗ್‌ ಅವರ ಶಕ್ತಿಶಾಲಿ ಹಾಗೂ ಚಾಣಾಕ್ಷ ಪಂಚ್‌'ಗಳಿಗೆ ತತ್ತರಿಸಿದ ಚೆಕಾ, ವಿಜೇಂದರ್‌ಗೆ ಸಡ್ಡು ಹೊಡೆ​ಯು​ವಲ್ಲಿ ವಿಫ​ಲ​ರಾ​ದ​ರು. 

ಮೊದಲ ರೌಂಡ್‌ನಲ್ಲಿ 3-1ರಿಂದ ಮೇಲುಗೈ ಮೆರೆದ ವಿಜೇಂದರ್‌, ಆ ನಂತರದ ಎರಡನೇ ಸುತ್ತಿನಲ್ಲಿ 7-3ರ ಮುನ್ನಡೆ ಪಡೆದರು. 
ಇನ್ನು ತೃತೀಯ ಸುತ್ತಿನಲ್ಲಂತೂ ಅತ್ಯಂತ ಆಕ್ರಮಣ ಕಾರಿಯಾದ ವಿಜೇಂದರ್‌ ಸಿಂಗ್‌ರನ್ನು ಚೆಕಾ ತಡೆದು ನಿಲ್ಲಿಸಿದ​ರು. ಅಷ್ಟ​ರ​ಲ್ಲಾ​ಗಲೇ ವಿಜಿಗೆ ಒಂದೆ​ರಡು ಉತ್ತಮ ಪಂಚ್‌​'ಗ​ಳನ್ನು ನೀಡಿ​ದ್ದರೂ ವಿಜೇಂದರ್‌ ಅವರ ಜಾಬ್‌ ತಡೆ​ಯಲು ಅಸಾ​ಧ್ಯ​ವಾಗಿ ಅವ​ರನ್ನು ಅಪ್ಪಿ​ಕೊಂಡು ತಳ್ಳುತ್ತಾ ಸಾಗಿ​ದರು ಚೆಕಾ. ಅಷ್ಟ​ರಲ್ಲಿ ಪಂದ್ಯದ ರೆಫರಿ ಮಧ್ಯ ಪ್ರವೇಶಿಸಿ ಚೆಕಾ ಅವ​ರನ್ನು ವಿಜಿ​ಯ​ವ​ರಿಂದ ಬೇರ್ಪ​ಡಿ​ಸಿ​ದರು.

ನಿಯ​ಮ​ಗಳ ಪ್ರಕಾರ, ಇದನ್ನು ನಾಕೌಟ್‌ ಎಂದು ಪರಿ​ಗ​ಣಿಸಲ್ಪ​ಡು​ವ ಹಿನ್ನೆ​ಲೆ​ಯ​ಲ್ಲಿ ವಿಜೇಂದರ್‌ ಅವ​ರನ್ನು ಚಾಂಪಿ​ಯನ್‌ ಎಂದು ಘೋಷಿ​ಸ​ಲಾ​ಯಿತು. ಈ ಪಂದ್ಯ​ದ​ಲ್ಲಿನ ಜಯವೂ ಸೇರಿ​ದಂತೆ ಪ್ರೊ ಬಾಕ್ಸಿಂಗ್‌'ಗೆ ಕಾಲಿ​ಟ್ಟಾಗಿ​ನಿಂದ ವಿಜಿ ಸತತ 8 ಜಯ ಕಂಡಂತಾ​ಗಿದೆ. 

(epaper.kannadaprabha.in)

Follow Us:
Download App:
  • android
  • ios