ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಬಿಸಿಸಿಐ ಆಯ್ಕೆ ಸಮಿತಿ ಶಿಖರ್ ‘ವನ್ ಅವರನ್ನು ಆಯ್ಕೆ ಮಾಡಿದೆ. ಅಭ್ಯಾಸ ಪಂದ್ಯದ ವೇಳೆ ವಿಜಯ್‌ಗೆ ಮಣಿಕಟ್ಟಿನ ನೋವು ಕಾಣಿಸಿಕೊಂಡಿದ್ದು, ಬಿಸಿಸಿಐ ವೈದ್ಯರ ತಂಡ ಇನ್ನಷ್ಟು ದಿನಗಳ ಕಾಲ ವಿಶ್ರಾಂತಿ ಹಾಗೂ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಸೂಚಿಸಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ವೇಳೆ ವಿಜಯ್ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದರು. ಮೂಳೆ ಮುರಿದಿದ್ದರೂ ಸರಣಿಯಲ್ಲಿ ಆಡಿದ್ದಾಗಿ ವಿಜಯ್ ಬಹಿರಂಗಗೊಳಿಸಿದ್ದರು.

ಮುಂಬೈ(ಜು.18): ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಬಿಸಿಸಿಐ ಆಯ್ಕೆ ಸಮಿತಿ ಶಿಖರ್ ‘ವನ್ ಅವರನ್ನು ಆಯ್ಕೆ ಮಾಡಿದೆ.

ಅಭ್ಯಾಸ ಪಂದ್ಯದ ವೇಳೆ ವಿಜಯ್‌ಗೆ ಮಣಿಕಟ್ಟಿನ ನೋವು ಕಾಣಿಸಿಕೊಂಡಿದ್ದು, ಬಿಸಿಸಿಐ ವೈದ್ಯರ ತಂಡ ಇನ್ನಷ್ಟು ದಿನಗಳ ಕಾಲ ವಿಶ್ರಾಂತಿ ಹಾಗೂ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಸೂಚಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ವೇಳೆ ವಿಜಯ್ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದರು. ಮೂಳೆ ಮುರಿದಿದ್ದರೂ ಸರಣಿಯಲ್ಲಿ ಆಡಿದ್ದಾಗಿ ವಿಜಯ್ ಬಹಿರಂಗಗೊಳಿಸಿದ್ದರು.

ಒನ್‌'ಡೇ ಪ್ರದರ್ಶನಕ್ಕೆ ಟೆಸ್ಟ್ ತಂಡದಲ್ಲಿ ಸ್ಥಾನ!:

ಶಿಖರ್ ಧವನ್ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು. ಆನಂತರ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯ ಮೊದಲೆರಡು ಏಕದಿನಗಳಲ್ಲಿ ಅ‘ರ್ಶತಕ ಬಾರಿಸಿದ್ದ ‘ವನ್, ಆನಂತರ ವೈಲ್ಯ ಅನುBವಿಸಿದ್ದರು.

ಆದರೆ Dವನ್ ಕಳೆದ ಬಾರಿ ಭಾರತ ಪರ ಟೆಸ್ಟ್ ಆಡಿದ್ದು 2016ರಲ್ಲಿ. ನ್ಯೂಜಿಲೆಂಡ್ ವಿರುದ್ಧ ಕೋಲ್ಕತಾ ಟೆಸ್ಟ್, ಅವರಾಡಿದ ಕೊನೆ ಪಂದ್ಯ. ಅಲ್ಲದೇ ಕಳೆದ 14 ಇನ್ನಿಂಗ್ಸ್'ನಲ್ಲಿ ಒಂದೇ ಒಂದು ಇನ್ನಿಂಗ್ಸ್‌ನಲ್ಲಿ ಮಾತ್ರ ‘ವನ್ ಅರ್ಧರ್ಶತಕ ಬಾರಿಸುವಲ್ಲಿ ಸಲರಾಗಿದ್ದಾರೆ. ಹೀಗಿರುವಾಗ ಭವನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಧವನ್ ಆಗಮನದಿಂದ ಮುಕುಂದ್‌ಗೆ ಸಂಕಷ್ಟ?: ಶಿಖರ್ ‘ವನ್ ತಂಡಕ್ಕೆ ವಾಪಸ್ಸಾಗಿರುವುದು ತಮಿಳುನಾಡಿನ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್‌ಗೆ ಸಂಕಷ್ಟ ಎದುರಾದಂತಾಗಿದೆ. ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿರುವ ಧವನ್, ಮೊದಲು ಪ್ರಟಕಗೊಂಡಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ಮುಕುಂದ್ ಸ್ಥಾನವನ್ನು ಕಸಿದುಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಸಹ ಉದ್ಭವವಾಗಿದೆ. ‘ವನ್‌ಗೆ ನಾಯಕ ವಿರಾಟ್ ಕೊಹ್ಲಿಯ ಬೆಂಬಲವಿರುವುದು ಸಹ ಈ ಪ್ರಶ್ನೆ ಏಳಲು ಒಂದು ಕಾರಣ. ಜುಲೈ 26ರಂದು ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಭಾರತ ಜುಲೈ 21ರಿಂದ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಕೆ. ಎಲ್.ರಾಹುಲ್ ಜತೆ ಇನ್ನಿಂಗ್ಸ್ ಆರಂಭಿಸುವ ಆಟಗಾರ ಯಾರು ಎನ್ನುವುದು ಖಾತರಿಯಾಗಲಿದೆ.

ಟೆಸ್ಟ್ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ. ಎಲ್.ರಾಹುಲ್, ಅಭಿನವ್ ಮುಕುಂದ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಕುಲ್ದೀಪ್ ಯಾದವ್.