ಕಳೆದ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗೂ ಆಗಮಿಸಿ ಭಾರತೀಯ ಮಾಧ್ಯಮಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಲಂಡನ್(ಜೂ.11): ದೇಶದ ರಾಷ್ಟ್ರೀಕೃತ ಬ್ಯಾಂಕ್'ಗಳಿಗೆ ನೂರಾರು ಕೋಟಿ ವಂಚನೆ ಮಾಡಿ, ಇಂಗ್ಲೆಂಡ್‌'ನಲ್ಲಿ ಬೀಡುಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯರನ್ನು ‘ಕಳ್ಳ... ಕಳ್ಳ...’ ಎಂದು ಗೇಲಿ ಮಾಡಿದ ಘಟನೆ ಓವಲ್ ಮೈದಾನದ ಹೊರಗೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ವೀಕ್ಷಿಸಲು ದ ಓವಲ್ ಕ್ರೀಡಾಂಗಣಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಕಂಡ ಕೆಲ ಪ್ರೇಕ್ಷಕರು ‘ಅಲ್ಲಿ ನೋಡಿ ಕಳ್ಳ, ಕಳ್ಳ.. ಕ್ರೀಡಾಂಗಣಕ್ಕೆ ಬರುತ್ತಿದ್ದಾನೆ’ ಎಂದು ಜೋರಾಗಿ ಕೂಗಿದರು. ಈ ಯಾವುದೇ ಪ್ರತಿಕ್ರಿಯೆ ನೀಡದೆ ಮಲ್ಯ ನೇರವಾಗಿ ಮೈದಾನ ಪ್ರವೇಶಿಸಿದರು.

ಕಳೆದ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗೂ ಆಗಮಿಸಿ ಭಾರತೀಯ ಮಾಧ್ಯಮಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆ ಬಳಿಕ ಮಾಧ್ಯಮಗಳಿಗೂ ಸೆಡ್ಡುಹೊಡೆದು ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳಿಗೂ ಮೈದಾನಕ್ಕೆ ಹೋಗಿ ಭಾರತ ತಂಡವನ್ನು ಹುರಿದುಂಬಿಸುವುದಾಗಿ ತಿರುಗೇಟು ನೀಡಿದ್ದರು.