ಕರ್ನಾಟಕಕ್ಕೆ ಸುಲಭ ತುತ್ತಾದ ಅಸ್ಸಾಂ; ಮತ್ತೆ ಮಿಂಚಿದ ಅಗರ್'ವಾಲ್

First Published 8, Feb 2018, 8:24 PM IST
Vijay Hazare Trophy Karnataka Thrash Assam by 111 Runs
Highlights

ಇಲ್ಲಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 303 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಅಸ್ಸಾಂ ಕೇವಲ 194 ರನ್‌'ಗಳಿಗೆ ಸರ್ವಪತನ ಕಂಡಿತು. ವೇಗಿ ಪ್ರಸಿಧ್ ಕೃಷ್ಣ ಮಾರಕ ದಾಳಿಗೆ ಅಸ್ಸಾಂ ಬ್ಯಾಟ್ಸ್'ಮನ್'ಗಳು ನಿರುತ್ತರರಾದರು. ಪ್ರಸಿಧ್ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಪ್ರದೀಪ್. ಟಿ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದು ಅಸ್ಸಾಂ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬೆಂಗಳೂರು(ಫೆ.08): ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ‘ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 111 ರನ್‌'ಗಳ ಜಯ ದಾಖಲಿಸಿದೆ. ಬ್ಯಾಟಿಂಗ್'ನಲ್ಲಿ ಮಯಾಂಕ್ ಅಗರ್'ವಾಲ್, ಕರುಣ್ ನಾಯರ್ ಹಾಗೂ ಆರ್. ಸಮರ್ಥ್ ಅರ್ಧಶತಕ ಬಾರಿಸಿದರೆ, ಬೌಲಿಂಗ್'ನಲ್ಲಿ ವೇಗಿ ಪ್ರಸಿಧ್ ಕೃಷ್ಣ 6 ವಿಕೆಟ್ ಕಬಳಿಸಿ ಮಿಂಚಿದರು.

‘ಎ’ ಗುಂಪಿನಲ್ಲಿ ಸತತ 2 ಭರ್ಜರಿ ಗೆಲುವುಗಳನ್ನು ಸಾಧಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಕರ್ನಾಟಕ ತಂಡ 8 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 303 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಅಸ್ಸಾಂ ಕೇವಲ 194 ರನ್‌'ಗಳಿಗೆ ಸರ್ವಪತನ ಕಂಡಿತು. ವೇಗಿ ಪ್ರಸಿಧ್ ಕೃಷ್ಣ ಮಾರಕ ದಾಳಿಗೆ ಅಸ್ಸಾಂ ಬ್ಯಾಟ್ಸ್'ಮನ್'ಗಳು ನಿರುತ್ತರರಾದರು. ಪ್ರಸಿಧ್ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಪ್ರದೀಪ್. ಟಿ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದು ಅಸ್ಸಾಂ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಸ್ಸಾಂ ಪರ ಸಿಬ್ಸಂಕರ್ ರಾಯ್ 64 ಹಾಗೂ ಅಬು ನಚೀಮ್ 43* ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಆದರೆ ಆರಂಭಿಕ ಕೆ.ಎಲ್ ರಾಹುಲ್ (22) ಬೇಗನೆ ನಿರ್ಗಮಿಸಿದರಾದರೂ, 2ನೇ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಹಾಗೂ ಕರುಣ್ ನಾಯರ್ 100 ರನ್‌'ಗಳ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಮಯಾಂಕ್ (84), ಕರುಣ್ ನಾಯರ್ (58) ರನ್‌'ಗಳಿಸಿದರು. ಇನ್ನು ಸಮರ್ಥ್ 70* ಹಾಗೂ ಪವನ್ ದೇಶ್'ಪಾಂಡೆ(43) ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡ್ಯೊಯ್ದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 303/6

(ಮಯಾಂಕ್ 84, ಸಮರ್ಥ್ 70, ಅಬು ನೆಚಿಮ್ 51/2)

ಅಸ್ಸಾಂ: 192/10

(ಸಿಬ್ಸಂಕರ್ 64, ಅಬು ನೆಚಿಮ್ 43*, ಪ್ರಸಿಧ್ ಕೃಷ್ಣ 33/6)

 

loader