ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಲಿಯಾಮ್ ಥಾಮಸ್ ಚೆಂಡನ್ನು ಹಿಡಿಯಲು ಓಡುವಾಗ ಅವರ ಕೃತಕ ಕಾಲು ಮುರಿದುಬಿದ್ದಿತ್ತು. ಆ ದೃಶ್ಯ ಕಂಡು ಎಲ್ಲರಿಗೂ ಶಾಕ್ ಆಗಿತ್ತು. ಆದರೆ...

ಲಂಡನ್(ಅ. 31): ಕ್ರೀಡಾಸ್ಫೂರ್ತಿ ಮತ್ತು ಕೆಚ್ಚು ಎಂದರೆ ಇದೇ ಇರಬೇಕು...! ಇಂಗ್ಲೆಂಡ್'ನ ಲಿಯಾಮ್ ಥಾಮಸ್ ಎಂಬ ಅಂಗವಿಕಲ ಕ್ರೀಡಾಪಟುವೊಬ್ಬ ಫೀಲ್ಡಿಂಗ್ ಮಾಡುವಾಗ ತನ್ನ ಕೃತಕ ಕಾಲು ಮುರಿದುಬಿದ್ದರೂ ಎದೆಗುಂದದೆ ಆಟ ಮುಂದುವರಿಸಿದ ಅಪರೂಪದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಆ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿಬಿಟ್ಟಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಅಂಗವಿಕಲ ತಂಡಗಳ ನಡುವಿನ ಟಿ20 ಪಂದ್ಯದ ವೇಳೆ ಈ ಘಟನೆ ನಡೆದಿದೆ. ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಲಿಯಾಮ್ ಥಾಮಸ್ ಚೆಂಡನ್ನು ಹಿಡಿಯಲು ಓಡುವಾಗ ಅವರ ಕೃತಕ ಕಾಲು ಮುರಿದುಬಿದ್ದಿತ್ತು. ಆ ದೃಶ್ಯ ಕಂಡು ಎಲ್ಲರಿಗೂ ಶಾಕ್ ಆಗಿತ್ತು. ಆದರೆ, ನೋಡನೋಡುತ್ತಿದ್ದಂತೆ ಲಿಯಾನ್ ಥಾಮಸ್ ಸ್ವಲ್ಪವೂ ಎದೆಗುಂದದೆ ಕುಂಟಿಕೊಂಡೇ ಹೋಗಿ ಚೆಂಡನ್ನ ಹಿಡಿದು ಎಸೆತ್ತಾರೆ. ಇದು ಪ್ರೇಕ್ಷಕರಿಗೆ ಇನ್ನಷ್ಟು ದಂಗುಬಡಿಸುತ್ತದೆ. ದುರದೃಷ್ಟಕ್ಕೆ ಲಿಯಾನ್ ಥಾಮಸ್ ಅವರ ಈ ಕೆಚ್ಚೆದೆಯ ಸಾಹಸವು ತಂಡಕ್ಕೆ ಗೆಲುವು ತಂದುಕೊಡುವುದಿಲ್ಲ. ಪಾಕಿಸ್ತಾನವು ಈ ಪಂದ್ಯ ಗೆದ್ದು ದುಬೈ ಇನ್ವಿಟೇಶನಲ್ ಟೂರ್ನಿಯನ್ನು ಮುಡಿಗೇರಿಸಿಕೊಳ್ಳುತ್ತದೆ.