ಪ್ರತಿಷ್ಠಿತ ಗ್ರ್ಯಾಂಡ್'ಸ್ಲ್ಯಾಮ್ ಟ್ರೋಫಿಯನ್ನು 7 ಬಾರಿ ಗೆದ್ದಿರುವ ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್, ಈ ಬಾರಿಯ ಯುಎಸ್ ಓಪನ್‌'ನ ಸೆಮೀಸ್‌'ಗೇರಿದ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನ್ಯೂಯಾರ್ಕ್(ಸೆ.06): ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಮತ್ತು ಅದೇ ದೇಶದ ಯುವ ಆಟಗಾರ್ತಿ ಸ್ಲೋನೆ ಸ್ಟೀಫೆನ್ಸ್ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಷ್ಠಿತ ಗ್ರ್ಯಾಂಡ್'ಸ್ಲ್ಯಾಮ್ ಟ್ರೋಫಿಯನ್ನು 7 ಬಾರಿ ಗೆದ್ದಿರುವ ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್, ಈ ಬಾರಿಯ ಯುಎಸ್ ಓಪನ್‌'ನ ಸೆಮೀಸ್‌'ಗೇರಿದ ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

37 ವರ್ಷ ವಯಸ್ಸಿನ ವೀನಸ್ ವಿಲಿಯಮ್ಸ್ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ 2 ಬಾರಿ ವಿಂಬಲ್ಡನ್ ಚಾಂಪಿಯನ್ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಸೋಲಿಸಿದರು.

ವೀನಸ್ 6-3, 3-6, 7-6(7-2) ಸೆಟ್‌'ಗಳಿಂದ ಕ್ವಿಟೋವಾ ಎದುರು ಜಯದ ನಗೆ ಬೀರಿದರು.