ಅಪಘಾತ ನಡೆದ ಮೃತ ವ್ಯಕ್ತಿಯನ್ನು ಜೇರೋಮ್ ಬಾರ್ಸನ್ ಎಂದು ಗುರುತಿಸಲಾಗಿದ್ದು, ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಮಿಯಾಮಿ(ಜೂ.30): ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ 78 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಸ್ಟಾರ್ ಆಟಗಾರ್ತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಯಾಮಿ ನಗರದ ಉತ್ತರ ಭಾಗದಲ್ಲಿರುವ ಪಾಮ್ ಬೀಚ್ ಗಾರ್ಡನ್ ಬಳಿ ಜೂ.9ರಂದು ಅಪಘಾತ ನಡೆದಿದ್ದು, 2 ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ವೀನಸ್ ವಿಲಿಯಮ್ಸ್ ತಪ್ಪಿತಸ್ಥೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ನಡೆದ ಮೃತ ವ್ಯಕ್ತಿಯನ್ನು ಜೇರೋಮ್ ಬಾರ್ಸನ್ ಎಂದು ಗುರುತಿಸಲಾಗಿದ್ದು, ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರ ಪತ್ನಿ ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ವೀನಸ್ ಅವರ ಕಾರಿನೊಂದಿಗೆ ಅವಘಡ ಸಂಭವಿಸಿದೆ.

ವೀನಸ್ ಕಾರು ಚಾಲನೆ ಮಾಡುವಾಗ ಯಾವುದೇ ರೀತಿಯ ಮದ್ಯಪಾನವಾಗಲೀ, ಮಾದಕ ಸೇವನೆಯಾಗಲಿ ಮಾಡಿರಲಿಲ್ಲ. ಪ್ರಕರಣದ ತನಿಖೆ ನಡೆಸಲಾಗುತ್ತಿದೆಯಾದರೂ ಅವರ ಮೇಲೆ ಇನ್ನೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಪಾಮ್ ಬೀಚ್ ಗಾರ್ಡನ್ ಪೊಲೀಸರು ಮಾಹಿತಿ ನೀಡಿದ್ದಾರೆ.