ಕಿಂಗ್ಸ್‌ ಇಲೆವೆನ್‌ ತಂಡ ಲೀಗ್‌ನಿಂದಲೇ ಹೊರಬಿದ್ದ ಕಾರಣ ತಂಡ ಕ್ರಿಕೆಟ್‌ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್‌ಗೀಗ ಬಿಡುವಿನ ಸಮಯ.

ಬೆಂಗಳೂರು(ಮೇ.18): ಐಪಿಎಲ್‌ 10ನೇ ಆವೃತ್ತಿ ರೋಚಕ ಘಟ್ಟತಲುಪಿದ್ದು, ಇನ್ನೇನಿದ್ದೂ ಚಾಂಪಿಯನ್‌ ಆಗುವ ತಂಡ ಯಾವುದು ಅನ್ನುವ ಲೆಕ್ಕಾಚಾರ ಮಾತ್ರ. 
ಕಿಂಗ್ಸ್‌ ಇಲೆವೆನ್‌ ತಂಡ ಲೀಗ್‌ನಿಂದಲೇ ಹೊರಬಿದ್ದ ಕಾರಣ ತಂಡ ಕ್ರಿಕೆಟ್‌ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್‌ಗೀಗ ಬಿಡುವಿನ ಸಮಯ. ಈ ಸಮಯದಲ್ಲಿ ಪತ್ನಿ ಜತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದ ವೀರೂ, ಅಲ್ಲೂ ಸಹ ಕ್ರಿಕೆಟ್‌ ವೀಕ್ಷಣೆ ಮಾಡಿ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದಾರೆ. 
ಮೊಬೈಲ್‌ನಲ್ಲಿ ಮುಂಬೈ- ಪುಣೆ ನಡುವಿನ ಮೊದಲ ಕ್ವಾಲಿಫೈಯರ್‌ ಪಂದ್ಯ ವೀಕ್ಷಿಸುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿ, ‘‘ಪತ್ನಿ ಸಂತಸವಾಗಿದ್ದರೆ ಜೀವನ ಸುಖವಾಗಿರುತ್ತದೆ. ಥಿಯೇಟರ್‌ನಲ್ಲಿ ಪತ್ನಿ ಸಿನಿಮಾ ನೋಡುತ್ತಿದ್ದರೆ, ನಾನು ಕ್ರಿಕೆಟ್‌ ನೋಡುತ್ತಿದ್ದೇನೆ. ಅವಳಿಗೂ ಖುಷಿ, ನನಗೂ ಖುಷಿ'' ಎಂದು ಬರೆದಿದ್ದಾರೆ.