ಮೊದಲು ಜೀವನ ನಿರ್ವಹಣೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ದೇವರ ದಯೆಯಿಂದ ನನ್ನ ಬದುಕು ಬದಲಾಯಿತು. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಗಳಿಸಿತು. ಇದರ ಬೆನ್ನಲ್ಲೇ ನನಗೆ ಸಿಕ್ಕ 50 ಲಕ್ಷ ಹಣದಲ್ಲಿ ಹಳೆ ಕಾರಿನ ಇಎಂಐ ಕಂತು ಕಟ್ಟಿದೆ. ಜೊತೆಗೆ ಹೊಸ ಕಾರನ್ನೂ ಖರೀಧಿಸಿದೆ ಎಂದು ಪಾಂಡ್ಯ ಆ ದಿನಗಳನ್ನು ಮೆಲುಕು ಹಾಕಿದರು.

ಮುಂಬೈ(ಡಿ.03): ಐಪಿಎಲ್‌'ಗೂ ಮುನ್ನಾ ನನ್ನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಒಂದೊಂದು ರುಪಾಯಿಗೂ ಕಷ್ಟಪಡುವ ಸ್ಥಿತಿಯಿತ್ತು. ಸಾಲದ ಕಂತು ಕಟ್ಟಲಾಗದೆ 2 ವರ್ಷ ನನ್ನ ಕಾರನ್ನು ಬಚ್ಚಿಟ್ಟಿದ್ದೆ ಎಂದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂದರ್ಶನವೊಂದರಲ್ಲಿ ಪಾಂಡ್ಯ, ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘3 ವರ್ಷ ಸಾಕಷ್ಟು ಕಷ್ಟ ಪಟ್ಟಿದ್ದೆ. 2015ರ ಐಪಿಎಲ್ ಬಳಿಕ ಜೀವನವೇ ಬದಲಾಯಿತು. ಮುಂಬೈ ತಂಡ ಆ ಬಾರಿ ಚಾಂಪಿಯನ್ ಆಗುತ್ತಿದ್ದಂತೆ ₹50 ಲಕ್ಷ ದೊರೆಯಿತು’ ಎಂದಿದ್ದಾರೆ.