ಕಳೆದ ಒಂದು ದಶಕದಿಂದಲೂ 100 ಮೀಟರ್‌ ಓಟದ ಸ್ಫರ್ಧೆಯಲ್ಲಿ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದ ಜಮೈಕಾದ ಉಸೇನ್‌ ಬೋಲ್ಟ್‌ ತಮ್ಮ ವೃತ್ತಿ ಬದುಕಿನ ಕೊನೆಯ ಓಟದಲ್ಲಿ ಸೋಲನುಭವಿಸಿದ್ದಾರೆ.

ಕಳೆದ ಒಂದು ದಶಕದಿಂದಲೂ 100 ಮೀಟರ್‌ ಓಟದ ಸ್ಫರ್ಧೆಯಲ್ಲಿ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದ ಜಮೈಕಾದ ಉಸೇನ್‌ ಬೋಲ್ಟ್‌ ತಮ್ಮ ವೃತ್ತಿ ಬದುಕಿನ ಕೊನೆಯ ಓಟದಲ್ಲಿ ಸೋಲನುಭವಿಸಿದ್ದಾರೆ.

ಲಂಡನ್‌'ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 100 ಮೀಟರ್‌ ಓಟದ ಸ್ಫರ್ಧೆಯಲ್ಲಿ ಅಮೆರಿಕದ ಜಸ್ಟಿನ್‌ ಗ್ಯಾಟ್ಲಿನ್‌ ಮಿಂಚಿನಂತೆ ಓಡಿ ಬೋಲ್ಟ್‌ಗೆ ಶಾಕ್ ನೀಡಿದ್ದಾರೆ. ಅತ್ಯಂತ ರೋಚಕ ಅಂತ್ಯ ಕಂಡ ಓಟದಲ್ಲಿ 9.92 ಸೆಕೆಂಡ್‌ನಲ್ಲಿ ಗುರಿಯನ್ನು ತಲುಪಿದ ಜಸ್ಟಿನ್‌ ಗ್ಯಾಟ್ಲಿನ್‌ ಮೊದಲಿಗರಾಗಿ ಹೊರಹೊಮ್ಮಿದರು.

9.94 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕ್ರಿಸ್ಟಿಯನ್‌ ಕೋಲ್ಮನ್‌ ಎರಡನೇಯವರಾದರೆ, ಉಸೇನ್‌ ಬೋಲ್ಟ್‌ 9.95 ಸೆಕೆಂಡ್‌ನಲ್ಲಿ ಓಟ ಪೂರೈಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದರೊಂದಿಗೆ ಚಿನ್ನದ ಪದಕ ಗೆದ್ದು ವೃತ್ತಿ ಬದುಕಿಗೆ ವಿದಾಯ ಹೇಳಬೇಕೆಂದಿದ್ದ ಉಸೇನ್‌ ಬೋಲ್ಟ್'ಗೆ ತೀವ್ರ ನಿರಾಸೆ ಉಂಟಾಯಿತು.

ಮೂವತ್ತು ವರ್ಷದ ಉಸೇನ್ ಬೋಲ್ಟ್‌ ಇದರೊಂದಿಗೆ ಟ್ರ್ಯಾಕ್‌ನಿಂದ ದೂರ ಸರಿದಿದ್ದಾರೆ. ಜಸ್ಟಿನ್‌ ಗ್ಯಾಟ್ಲಿನ್‌ ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬೋಲ್ಟ್‌ ವಿರುದ್ಧ ಜಯ ಸಾಧಿಸಿದ್ದಾರೆ ಎಂಬುದು ಗಮನಾರ್ಹ.