ಫ್ರಾನ್ಸ್(ಸೆ.13): ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಇದೀಗ ಶೂನ್ಯ ಗುರತ್ವಬಲದಲ್ಲೂ ದಾಖಲೆ ಬರೆದಿದ್ದಾರೆ. 8 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಡ್ ಇದೀಗ ಆಕಾಶದಲ್ಲಿ ಆಯೋಜಿಸಿದ ಓಟದಲ್ಲೂ ಗೆಲುವು ಸಾಧಿಸಿದ್ದಾರೆ.

 

 

ಶೂನ್ಯ ಗುರುತ್ವಾಕರ್ಷಣೆ ಸ್ಥರದಲ್ಲಿ ವಿಮಾನದೊಳಗೆ ರೇಸ್ ಆಯೋಜಿಸಲಾಗಿತ್ತು. ಈ ವಿಶೇಷ ಓಟದಲ್ಲಿ ಜಮೈಕಾ ಓಟಗಾರ ಉಸೇನ್ ಬೋಲ್ಟ್ ಗಾಳಿಯಲ್ಲಿ ತೇಲಾಡುತ್ತಾ ಗುರಿ ತಲುಪಿದ್ದಾರೆ. ಈ ಮೂಲಕ ಪ್ರಶಸ್ತಿ ಗೆದ್ದರು.

 

 

ಉಸೇನ್ ಬೋಲ್ಡ್ ಸೇರಿದಂತೆ ಮೂವರು ಓಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇನ್ನಿಬ್ಬರನ್ನ ಕ್ಷಣಾರ್ಧಲ್ಲೇ ಹಿಂದಿಕ್ಕಿದ ಬೋಲ್ಟ್ ಗುರಿ ತಲುಪಿದರು.

 

 

ಶಾಂಪೆನ್ ಪ್ರಚಾರಕ್ಕಾಗಿ ಆಕಾಶದಲ್ಲಿ ಈ ರೇಸ್ ಆಯೋಜಿಸಲಾಗಿತ್ತು. ವೀಡಿಯೋ ಶೇರ್ ಮಾಡಿದ ಕೆಲ ಹೊತ್ತಲ್ಲೇ 1.5 ಮೀಲಿಯನ್ ಜನ ವೀಡಿಯೋ ವೀಕ್ಷಿಸಿದ್ದಾರೆ.