ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 20ರ ಹರೆಯ ಆಲ್ಕರಜ್‌, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-3, 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಅಗ್ರ ಶ್ರೇಯಾಂಕಿತ ಆಲ್ಕರಜ್‌ಗೆ ಪ್ರಬಲ ಪೈಪೋಟಿ ನೀಡಲು ಜರ್ಮನಿ ಆಟಗಾರ ಪ್ರಯತ್ನಿಸಿದರೂ ತಮ್ಮ ಬಲಿಷ್ಠ ಹೊಡೆತಗಳ ಮೂಲಕ ಆಲ್ಕರಜ್‌ ಮೇಲುಗೈ ಸಾಧಿಸಿದರು.

ನ್ಯೂಯಾರ್ಕ್‌(ಸೆ.09): ಟೆನಿಸ್‌ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಯುವ ಪ್ರತಿಭೆ, ಸ್ಪೇನ್‌ ಕಾರ್ಲೊಸ್‌ ಆಲ್ಕರಜ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಮತ್ತೊಮ್ಮೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 3ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್ ಕೂಡಾ ಅಂತಿಮ 4ರ ಘಟ್ಟ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 20ರ ಹರೆಯ ಆಲ್ಕರಜ್‌, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-3, 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಅಗ್ರ ಶ್ರೇಯಾಂಕಿತ ಆಲ್ಕರಜ್‌ಗೆ ಪ್ರಬಲ ಪೈಪೋಟಿ ನೀಡಲು ಜರ್ಮನಿ ಆಟಗಾರ ಪ್ರಯತ್ನಿಸಿದರೂ ತಮ್ಮ ಬಲಿಷ್ಠ ಹೊಡೆತಗಳ ಮೂಲಕ ಆಲ್ಕರಜ್‌ ಮೇಲುಗೈ ಸಾಧಿಸಿದರು. ಇದರೊಂದಿಗೆ 2008ರ ಬಳಿಕ ಸತತ 2 ಬಾರಿ ಯುಎಸ್‌ ಓಪನ್‌ ಗೆದ್ದ ಆಟಗಾರ ಎನಿಸಿಕೊಳ್ಳುವ ಹಾದಿಯಲ್ಲಿ ಆಲ್ಕರಜ್‌ ಮತ್ತೊಂದು ಹೆಜ್ಜೆ ಮುಂದಿಟ್ಟರು. 2020ರ ಬಳಿಕ ಮತ್ತೊಮ್ಮೆ ಯುಎಸ್‌ ಓಪನ್‌ ಫೈನಲ್‌ಗೇರುವ ಜ್ವೆರೆವ್‌ ಕನಸು ಭಗ್ನಗೊಂಡಿತು.

2023ರ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿದ್ದಾನೆ 2011ರ ಟ್ರೋಫಿ ಗೆದ್ದ ಏಕೈಕ ಸದಸ್ಯ!

ಮತ್ತೊಂದು ಕ್ವಾರ್ಟರ್‌ನಲ್ಲಿ 2021ರ ಚಾಂಪಿಯನ್‌, ರಷ್ಯಾದ ಮೆಡ್ವೆಡೆವ್‌ ತಮ್ಮದೇ ದೇಶದ ಆ್ಯಂಡ್ರೆ ರುಬ್ಲೆವ್‌ರನ್ನು 6-4, 6-3, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ರುಬ್ಲೆವ್‌ 4ನೇ ಬಾರಿಯೂ ಯುಎಸ್‌ ಓಪನ್‌ ಕ್ವಾರ್ಟರ್‌ನಲ್ಲಿ ಸೋತರು. ಶುಕ್ರವಾರ ನಡೆಯಲಿರುವ ಸೆಮೀಸ್‌ನಲ್ಲಿ ಆಲ್ಕರಜ್‌-ಮೆಡ್ವೆಡೆವ್‌ ಮುಖಾಮುಖಿಯಾಗಲಿದ್ದಾರೆ.

ಸಬಲೆಂಕಾ ಸೆಮಿಗೆ

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ನೂತನ ನಂ.1 ಅರೈನಾ ಸಬಲೆಂಕಾ ಸೆಮೀಸ್‌ ಪ್ರವೇಶಿಸಿದರು. ಬೆಲಾರಸ್‌ನ ಸಬಲೆಂಕಾ ಕ್ವಾರ್ಟರ್‌ನಲ್ಲಿ ಚೀನಾದ, 23ನೇ ಶ್ರೇಯಾಂಕಿತ ಕ್ಸಿನ್‌ವೆನ್‌ ಝೆಂಗ್‌ ವಿರುದ್ಧ 6-1, 6-4 ಅಂತರದಲ್ಲಿ ಜಯಗಳಿಸಿದರು. ಮತ್ತೊಂದು ಕ್ವಾರ್ಟರ್‌ನಲ್ಲಿ 2023ರ ವಿಂಬಲ್ಡನ್‌ ವಿಜೇತೆ, ಚೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಅವರು ಅಮೆರಿಕದ ಮ್ಯಾಡಿಸನ್‌ ಕೈಸ್‌ ವಿರುದ್ಧ 1-6, 4-6ರಲ್ಲಿ ಆಘಾತಕಾರಿ ಸೋಲುಂಡು ಹೊರಬಿದ್ದರು. ಸೆಮೀಸ್‌ನಲ್ಲಿ ಸಬಲೆಂಕಾಗೆ ಮ್ಯಾಡಿಸನ್‌ ಸವಾಲು ಎದುರಾಗಲಿದೆ.

ಮಗನ ಹಾವಭಾವ ನೋಡಿಯೇ ಮಗನ ನಡೆ ಊಹಿಸ್ತಾರಂತೆ ಪ್ರಜ್ಞಾನಂದ ಅಮ್ಮ!

ಆಲ್ಕರಜ್‌-ಜೋಕೋ ಮತ್ತೆ ಫೈನಲ್‌ ಫೈಟ್‌?

ಇತ್ತೀಚೆಗಷ್ಟೇ ವಿಂಬಲ್ಡನ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಟೆನಿಸ್‌ ದಿಗ್ಗಜ ಜೋಕೋವಿಚ್‌ ಹಾಗೂ ಹೊಸ ಸೂಪರ್‌ ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಜೋಕೋ 24ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದರೆ, ಆಲ್ಕರಜ್‌ ಯುಎಸ್‌ ಓಪನ್‌ ಪ್ರಶಸ್ತಿ ತಮ್ಮಲ್ಲೇ ಉಳಿಸಿಕೊಳ್ಳುವುದರ ಜೊತೆಗೆ 3ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಏಷ್ಯನ್‌ ಟಿಟಿ: ಭಾರತ ತಂಡಕ್ಕೆ ಕಂಚಿನ ಪದಕ

ಪ್ಯೊನೆಂಗ್‌ಚಾಂಗ್‌(ದ.ಕೊರಿಯಾ): ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷ ತಂಡ ಕಂಚಿಗೆ ತೃಪ್ತಿಪಟ್ಟಿದೆ. ಬುಧವಾರ ಸೆಮಿಫೈನಲ್‌ನಲ್ಲಿ ಭಾರತ 0-3 ಅಂತರದಲ್ಲಿ ಚೈನೀಸ್‌ ತೈಪೆ ವಿರುದ್ಧ ಸೋಲುಂಡಿತು. ಶರತ್‌ ಕಮಲ್‌, ಜಿ.ಸತ್ಯನ್‌ ಹಾಗೂ ಹರ್ಮೀತ್‌ ದೇಸಾಯಿ ಮೂವರು ಸೋಲುಂಡು ನಿರಾಸೆ ಅನುಭವಿಸಿದರು. ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮೀಸ್‌ನಲ್ಲಿ ಸೋಲುವ ತಂಡಕ್ಕೂ ಕಂಚಿನ ಪದಕ ಸಿಗಲಿದೆ.