2023ರ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿದ್ದಾನೆ 2011ರ ಟ್ರೋಫಿ ಗೆದ್ದ ಏಕೈಕ ಸದಸ್ಯ!
2023ರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಪರ ವಿರೋಧಗಳು ಕೇಳಿಬರುತ್ತಿದೆ. ಆದರೆ ಈ ಬಾರಿ ಟೀಂ ಇಂಡಿಯಾ ಟ್ರೋಫಿ ಗೆಲ್ಲಲು ಹಲವು ಅವಕಾಶಗಳಿವೆ. ಜೊತೆಗೆ ಕೆಲ ಅದೃಷ್ಠವೂ ಕೂಡಿ ಬಂದಿದೆ. ಇದೀಗ 2011ರ ಚಾಂಪಿಯನ್ ತಂಡದಲ್ಲಿದ ಆಡಿದ ಏಕೈಕ ಸದಸ್ಯ 2023ರ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
2023ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಸದ್ಯ ಏಷ್ಯಾಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ, ವಿಶ್ವಕಪ್ ಗೆಲುವಿಗೆ ರಣತಂತ್ರ ರೂಪಿಸುತ್ತಿದೆ. ಇತ್ತ ತಂಡ ಕೂಡ ಪ್ರಕಟಗೊಂಡಿದೆ.
2023ರ ವಿಶ್ವಕಪ್ ಟೂರ್ನಿ ಗೆಲುವಿಗೆ ಟೀಂ ಇಂಡಿಯಾಗೆ ಹಲವು ಅವಕಾಶಗಳಿವೆ. ಜೊತೆಗೆ ಕೆಲ ಕಾಮನ್ ಫ್ಯಾಕ್ಟರ್ ಕೂಡ ಟೀಂ ಇಂಡಿಯಾ ಪರವಾಗಿದೆ.
2011ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಇದೀಗ ಮತ್ತೆ ಭಾರತ 2023ರ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. 2011 ಹಾಗೂ 2023ರ ತಂಡದಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ
2011ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 35 ರನ್ ಕಾಣಿಕೆ ನೀಡಿದ್ದರೆ, ಬಾಂಗ್ಲಾದೇಶ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದರು.
2019ರಲ್ಲಿ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದೀಗ ರೋಹಿತ್ ತಂಡದ ಪ್ರಮುಖ ಆಟಾಗರ ಕೊಹ್ಲಿ ಮೇಲೆ ಜವಾಬ್ದಾರಿ ಹೆಚ್ಚಿದೆ.
2011ರಲ್ಲಿ ಸಚಿನ್ ತೆಂಡೂಲ್ಕರ್‌ಗಾಗಿ ಟ್ರೋಫಿ ಗೆಲ್ಲಿಸಿದ ವಿರಾಟ್ ಕೊಹ್ಲಿ ಇದೀಗ ತಮ್ಮ ಸಾಮರ್ಥ್ಯಕ್ಕೆ ಟ್ರೋಫಿ ಮುಡಿಗೇರಿಸಿಕೊಳ್ಳಬೇಕಿದೆ. ಇತ್ತ ಐಸಿಸಿ ಟ್ರೋಫಿ ಬರ ಭಾರತ ನೀಗಿಸಿಕೊಳ್ಳಬೇಕಿದೆ.
2011ರ ಟ್ರೋಫಿ ಗೆದ್ದ ಟೀಂ ಇಂಡಿಯಾದಲ್ಲಿದ್ದ ಕೆಲವು ನಿವೃತ್ತಿಯಾಗಿದ್ದರೆ, ಮತ್ತೆ ಕೆಲ ಆಟಗಾರರು ಆಯ್ಕೆಯಾಗಿಲ್ಲ. ಆದರೆ ಕೊಹ್ಲಿ ಸ್ಥಿರ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿ ತಂಡದಲ್ಲಿದ್ದಾರೆ.