Asianet Suvarna News Asianet Suvarna News

US Open 2023: ಪ್ರಿ ಕ್ವಾರ್ಟರ್‌ಗೆ ಕಾರ್ಲೊಸ್‌ ಆಲ್ಕರಜ್‌ ಲಗ್ಗೆ

ಅಂತಿಮ 16ರ ಘಟ್ಟ ಪ್ರವೇಶಿಸಿದ ಕಾರ್ಲೋಸ್ ಆಲ್ಕರಜ್
ಯುಎಸ್ ಓಪನ್ ಟೂರ್ನಿಯಲ್ಲಿ ಆಲ್ಕರಜ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ
3ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ 4ನೇ ಸುತ್ತಿಗೆ ಪ್ರವೇಶ

US Open 2023 Carlos Alcaraz beats Dan Evans enters last 16 kvn
Author
First Published Sep 4, 2023, 9:54 AM IST

ನ್ಯೂಯಾರ್ಕ್‌(ಸೆ.04): ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಯುಎಸ್ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 3ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌ ಕೂಡಾ 4ನೇ ಸುತ್ತಿಗೇರಿದ್ದಾರೆ.

ಶನಿವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1, ಸ್ಪೇನ್‌ನ ಆಲ್ಕರಜ್‌ ಬ್ರಿಟನ್‌ನ ಡ್ಯಾನ್‌ ಎವಾನ್ಸ್‌ ವಿರುದ್ಧ 6-2, 6-3, 4-6, 6-3 ಸೆಟ್‌ಗಳಲ್ಲಿ ಗೆದ್ದರು. 2021ರ ಚಾಂಪಿಯನ್‌, ರಷ್ಯಾದ ಮೆಡ್ವೆಡೆವ್‌, ಅರ್ಜೆಂಟೀನಾದ ಸೆಬಾಸ್ಟಿಯನ್‌ ಬೆಜ್‌ರನ್ನು 6-2, 6-2, 7-6(8-6) ಅಂತರದಲ್ಲಿ ಸೋಲಿಸಿದರೆ, ಜರ್ಮನಿಯ ಜ್ವೆರೆವ್‌ ಬಲ್ಗೇರಿಯಾದ ಡಿಮಿಟ್ರೋವ್‌ ವಿರುದ್ಧ 6-7(2/7), 7-6(10/8), 6-1, 6-1 ಸೆಟ್‌ಗಳಲ್ಲಿ ಜಯಗಳಿಸಿದರು. 8ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್‌ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.

ನೆರೆಹೊರೆಯವರನ್ನು ಪ್ರೀತಿಸಿದರೆ ತಪ್ಪೇನಲ್ಲ..! ಕೊಹ್ಲಿ ಮೇಲಿನ ಅಭಿಮಾನ ತೋರಿದ ಪಾಕ್‌ ಮಹಿಳಾ ಅಭಿಮಾನಿ

ಜಬುರ್‌, ಪೆಗುಲಾಗೆ ಜಯ: ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲಲು ಕಾತರಿಸುತ್ತಿರುವ 5ನೇ ಶ್ರೇಯಾಂಕಿತೆ, ಟ್ಯುನೀಶಿಯಾದ ಒನ್ಸ್‌ ಜಬುರ್ ಮಹಿಳಾ ಸಿಂಗಲ್ಸ್‌ 4ನೇ ಸುತ್ತಿಗೇರಿದರು. ಅವರು ಚೆಕ್‌ ಗಣರಾಜ್ಯದ ಮೇರಿ ಬೋಜ್ಕೋವಾ ವಿರುದ್ಧ 5-7, 7-6(7/5), 6-3 ಸೆಟ್‌ಗಳಲ್ಲಿ ಗೆದ್ದರು. ಇದೇ ವೇಳೆ 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 4-6, 6-4, 6-2 ಅಂತರದಲ್ಲಿ ಗೆದ್ದರು.

ಹಾಕಿ: ಕರ್ನಾಟಕ ರನ್ನರ್‌-ಅಪ್‌

ಚೆನ್ನೈ: ದೇಶದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಹಾಕಿ ಟೂರ್ನಿಗಳಲ್ಲಿ ಒಂದಾದ ಎಂಸಿಸಿ-ಮುರುಗಪ್ಪ ಗೋಲ್ಡ್‌ ಅಲ್‌ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಹಾಕಿ ಫೈವ್ಸ್‌: ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಚಾಂಪಿಯನ್‌

ಭಾನುವಾರ ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತೀಯ ರೈಲ್ವೇಸ್‌ ವಿರುದ್ಧ ಕರ್ನಾಟಕ 2-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು. ಇದರೊಂದಿಗೆ ತಂಡದ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು. ಕರ್ನಾಟಕ ಪರ 17ನೇ ನಿಮಿಷದಲ್ಲಿ ತ್ರಿಶೂಲ್‌ ಗಣಪತಿ ಹಾಗೂ 52ನೇ ನಿಮಿಷದಲ್ಲಿ ಚೇತನ್ ಗೋಲು ಬಾರಿಸಿದರು. ಪಂದ್ಯದ ಆರಂಭದಲ್ಲೇ ಕರ್ನಾಟಕ ಮೇಲೆ ಹಿಡಿತ ಸಾಧಿಸಿದ್ದ ರೈಲ್ವೇಸ್‌ ದೊಡ್ಡ ಅಂತರದಲ್ಲಿ ಪಂದ್ಯ ಗೆದ್ದು ಚಾಂಪಿಯನ್‌ ಎನಿಸಿಕೊಂಡಿತು. ಪ್ರಶಸ್ತಿ ವಿಜೇತ ರೈಲ್ವೇಸ್‌ ತಂಡ 7 ಲಕ್ಷ ರು. ನಗದು ಬಹುಮಾನ ಪಡೆದುಕೊಂಡರೆ, ಕರ್ನಾಟಕ ತಂಡಕ್ಕೆ 5 ಲಕ್ಷ ರು. ನಗದು ಬಹುಮಾನ ಲಭಿಸಿತು.

ಯುಎಸ್ ಓಪನ್: ಪ್ರಿ ಕ್ವಾರ್ಟರ್‌ಗೆ ಜೋಕೋ, ಇಗಾ ಲಗ್ಗೆ

ಇಂದು ವೇಟ್‌ಲಿಫ್ಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ಆರಂಭ

ರಿಯಾದ್‌: 2023ರ ವೇಟ್‌ಲಿಫ್ಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ ಸೋಮವಾರ ರಿಯಾದ್‌ನಲ್ಲಿ ಆರಂಭವಾಗಲಿದ್ದು, ಭಾರತದ 6 ಸ್ಪರ್ಧಿಸಲಿದ್ದಾರೆ. 2017ರ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನು ಈ ಬಾರಿ ಕೂಟದಲ್ಲಿ ಕಾಣಿಸಿಕೊಂಡರೂ, ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹರಾಗಬೇಕಾದರೆ ವಿಶ್ವ ಕೂಟದಲ್ಲಿ ಪಾಲ್ಗೊಳ್ಳಬೇಕು. ಆದರೆ ಏಷ್ಯನ್‌ ಗೇಮ್ಸ್‌ ಮೇಲೆ ಚಿತ್ತವಿರಿಸಿರುವ ಚಾನು, ವಿಶ್ವ ಕೂಟಕ್ಕೆ ಹೆಸರು ನೋಂದಾಯಿಸಿದ್ದರೂ ಗಾಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರ ಎತ್ತುವುದಿಲ್ಲ. ಉಳಿದಂತೆ ಬೇರ್‍ಯಾವ ಭಾರತೀಯರು ಪದಕ ಗೆಲ್ಲುವ ನಿರೀಕ್ಷೆ ಇಲ್ಲ.
 

Follow Us:
Download App:
  • android
  • ios