ಯುಎಸ್ ಓಪನ್: ಪ್ರೀಕ್ವಾರ್ಟರ್’ಗೆ ಲಗ್ಗೆಯಿಟ್ಟ ನಡಾಲ್, ಸೆರೆನಾ

ಭಾರತದ ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್ ರೋಜರ್, ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡಿನ್, ಜಾಕ್ಸನ್ ಎದುರು ಜಯಿಸಿದರು. 

US Open 2018 Serena Williams and Rafael Nadal target last eight

ನ್ಯೂಯಾರ್ಕ್[ಸೆ.02]: ವಿಶ್ವದ ನಂ.1 ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆರೆನಾ ವಿಲಿಯಮ್ಸ್, ಇಲ್ಲಿ ನಡೆಯುತ್ತಿರುವ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.

18ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಉತ್ಸಾಹದಲ್ಲಿರುವ ರಾಫೆಲ್, ಯುಎಸ್ ಓಪನ್‌ನಲ್ಲಿ ಇದು ಸೇರಿದಂತೆ 10 ಬಾರಿ ಪ್ರಿ ಕ್ವಾರ್ಟರ್‌ಗೇರಿದ್ದಾರೆ. ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ರಾಫೆಲ್, ರಷ್ಯಾದ 22 ವರ್ಷದ ಕರೆನ್ ಖಚನೊವ್ ವಿರುದ್ಧ 5-7, 7-5, 7-6, 7-6 ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದರು.

ಕೆವಿನ್‌ಗೆ ಜಯ: ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ದ. ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್, 16ರ ಸುತ್ತಿಗೆ ಲಗ್ಗೆಇಟ್ಟಿದ್ದಾರೆ. ಕೆವಿನ್, ಕೆನಡಾದ ಡೆನಿಸ್ ಶಪೊವಲೊವ್ ಎದುರು 4-6, 6-3, 6-4, 4-6, 6-4 ಸೆಟ್‌ಗಳಲ್ಲಿ ಜಯ ಪಡೆದರು. 5ನೇ ಶ್ರೇಯಾಂಕಿತ ಕೆವಿನ್, 5 ವರ್ಷದಲ್ಲಿ 4ನೇ ಬಾರಿ ಪ್ರಿ ಕ್ವಾರ್ಟರ್‌ಗೇರಿದ್ದಾರೆ. ಇನ್ನೊಂದು ಸಿಂಗಲ್ಸ್‌ನಲ್ಲಿ 2016ರ ಚಾಂಪಿಯನ್ ಸ್ವಿಸ್‌ನ ವಾವ್ರಿಂಕಾ, 6-7, 4-6, 3-6 ಸೆಟ್‌ಗಳಲ್ಲಿ ಕೆನಡಾದ ಮಿಲೊಸ್ ರೋನಿಕ್ ವಿರುದ್ಧ ಸೋತರು.

ಅಜರೆಂಕಾಗೆ ಸೋಲು: ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನೆ ಸ್ಟೀಫನ್ಸ್ ಅದ್ಭುತ ಆಟದ ಎದುರು, ಮಾಜಿ ನಂ. 1 ಬೇಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಸೋತು ನಿರಾಸೆ ಅನುಭವಿಸಿದ್ದಾರೆ.

16ರ ಸುತ್ತಿಗೆ ಬೋಪಣ್ಣ ಜೋಡಿ: ಭಾರತದ ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್ ರೋಜರ್, ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡಿನ್, ಜಾಕ್ಸನ್ ಎದುರು ಜಯಿಸಿದರು. 

ವೀನಸ್ ವಿರುದ್ಧ ಸೆರೆನಾಗೆ ಗೆಲುವು
ಮಹಿಳೆಯರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್, ವೀನಸ್ ವಿಲಿಯಮ್ಸ್ ಎದುರು 6-1, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಪಡೆದರು. ದಾಖಲೆಯ 24ನೇ ಗ್ರ್ಯಾಂಡ್ ಸ್ಲಾಮ್ ಜಯದ ಉತ್ಸಾಹದಲ್ಲಿರುವ ಸೆರೆನಾ 16ರ ಸುತ್ತಿನಲ್ಲಿ ಈಸ್ಟೋನಿಯಾದ ಕಿಯಾ ಕನೆಪಿ ಎದುರು ಸೆಣಸಲಿದ್ದಾರೆ. ಕನೆಪಿ, ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತೆ ರೋಮೇನಿಯಾದ ಸಿಮೊನಾ ಹಾಲೆಪ್'ಗೆ ಆಘಾತ ನೀಡಿದ್ದರು. 

Latest Videos
Follow Us:
Download App:
  • android
  • ios