ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸ್ವಿಜರ್‌ಲೆಂಡ್‌ನ ಫೆಡರರ್, ಫ್ರಾನ್ಸ್‌ನ ಬೆನೊಯಿಟ್ ಪಿರೆ ಗೆಲುವು ಸಾಧಿಸಿದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಅಮೆರಿಕದ ಟೆನ್ನಿ ಸ್ಯಾಂಡ್ ಗ್ರೀನ್ ಎದುರು 6-1, 6-3, 6-7, 6-2 ಸೆಟ್‌ಗಳಲ್ಲಿ ಗೆಲುವು ಪಡೆದರು.

ನ್ಯೂಯಾರ್ಕ್[ಸೆ.01]: ಈ ಋತುವಿನ ಕೊನೆಯ ಗ್ರ್ಯಾಂಡ್‌ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ದಿಗ್ಗಜ ರೋಜರ್ ಫೆಡರರ್, ನೊವಾಕ್ ಜೋಕೋವಿಚ್ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸ್ವಿಜರ್‌ಲೆಂಡ್‌ನ ಫೆಡರರ್, ಫ್ರಾನ್ಸ್‌ನ ಬೆನೊಯಿಟ್ ಪಿರೆ ಗೆಲುವು ಸಾಧಿಸಿದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಅಮೆರಿಕದ ಟೆನ್ನಿ ಸ್ಯಾಂಡ್ ಗ್ರೀನ್ ಎದುರು 6-1, 6-3, 6-7, 6-2 ಸೆಟ್‌ಗಳಲ್ಲಿ ಗೆಲುವು ಪಡೆದರು.

ಶರ್ಪಿಗೆ ಜಯ, ವೋಜ್ನಿಯಾಕಿ ಔಟ್:

ರಷ್ಯಾದ ತಾರಾ ಆಟಗಾರ್ತಿ ಮರಿಯಾ ಶರಪೋವಾ ಜಯದ ಯಾತ್ರೆ ಮುಂದುವರಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಶರಪೋವಾ, ರೋಮೇನಿಯದ ಸೋರ್ನಾ ವಿರುದ್ಧ 6-2, 7-5 ಸೆಟ್‌ಗಳಲ್ಲಿ ಜಯ ಸಾಧಿಸಿದರು. 2ನೇ ರ‍್ಯಾಂಕಿಂಗ್‌ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ 2ನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. ವೋಜ್ನಿಯಾಕಿ 4-6, 2-6 ಸೆಟ್‌ಗಳಲ್ಲಿ ಉಕ್ರೇನ್‌ನ ಲೆಸಿಯಾ ಎದುರು ಸೋತರು. 

ಪೇಸ್ ಜೋಡಿಗೆ ಆಘಾತ: ಪುರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಅಮೆರಿಕದ ಜೇಮ್ಸ್ ಜೋಡಿ 3-6, 4-6 ಸೆಟ್‌ಗಳಲ್ಲಿ ಫ್ರಾನ್ಸ್‌ನ ಜೆರ್ಮಿ ಚಾರ್ಡಿ ಮತ್ತು ಮಾರ್ಟಿನ್ ಎದುರು ಸೋತರು. ಜೀವನ್ ಜೋಡಿ ಮೊದಲ ಸುತ್ತಲ್ಲಿ ಸೋಲು ಕಂಡಿತು. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೋಡಿ ಸೋತಿತು. ದಿವಿಜ್ ಶರಣ್ ಜೋಡಿ ಗೆದ್ದು 2ನೇ ಸುತ್ತಿಗೇರಿದೆ.