ಪ್ರೀ ಕ್ವಾರ್ಟರ್‌'ನಲ್ಲಿ ಶರಪೋವಾ ಲಾತ್ವಿಯಾದ ಅನಸ್ತಾಸಿಯಾ ಸೆವಸ್ಟೊವಾ ವಿರುದ್ಧ ಸೆಣಸಾಡಲಿದ್ದಾರೆ.

ನ್ಯೂಯಾರ್ಕ್(ಸೆ.02): ಸುಮಾರು 15 ತಿಂಗಳ ನಿಷೇಧದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌'ಸ್ಲಾಂನಲ್ಲಿ ಆಡುತ್ತಿರುವ ರಷ್ಯಾದ ಮರಿಯಾ ಶರಪೋವಾ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ 4ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2006ರ ಯುಎಸ್ ಓಪನ್ ಚಾಂಪಿಯನ್, ಮೂರನೇ ಸುತ್ತಿನಲ್ಲಿ ಅಮೆರಿಕದ ಯುವ ಆಟಗಾರ್ತಿ ಸೊಫಿಯಾ ಕೆನಿನ್ ವಿರುದ್ಧ 7-5, 6-2 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಪ್ರೀ ಕ್ವಾರ್ಟರ್‌'ನಲ್ಲಿ ಶರಪೋವಾ ಲಾತ್ವಿಯಾದ ಅನಸ್ತಾಸಿಯಾ ಸೆವಸ್ಟೊವಾ ವಿರುದ್ಧ ಸೆಣಸಾಡಲಿದ್ದಾರೆ.

ಇನ್ನು ಮೂರನೇ ಶ್ರೇಯಾಂಕಿತೆ ಸ್ಪೇನ್‌'ನ ಗಾರ್ಬೈನ್ ಮುಗುರುಜಾ ಹಾಗೂ 9ನೇ ಶ್ರೇಯಾಂಕಿತೆ ಅಮೆರಿಕದ ವೀನಸ್ ವಿಲಿಯಮ್ಸ್ ಸಹ 3ನೇ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು.

ಸ್ಲೊವಾಕಿಯಾದ ಮಾಗ್ದಲೆನಾ ರೈಬಾರಿಕೊವಾ ವಿರುದ್ಧ ಮುಗುರುಜಾ 6-1, 6-1 ಸೆಟ್‌'ಗಳಲ್ಲಿ ಜಯಿಸಿದರೆ, ಗ್ರೀಸ್‌'ನ ಮರಿಯಾ ಸಕ್ಕಾರಿ ವಿರುದ್ಧ ವೀನಸ್ 6-3, 6-4ರಲ್ಲಿ ಗೆದ್ದು 4ನೇ ಸುತ್ತಿಗೆ ಕಾಲಿರಿಸಿದರು.