ಕೊಲಂಬೊ(ಡಿ.13):  ಅಂಡರ್‌ 23 ಉದಯೋನ್ಮುಖ ತಂಡಗಳ ಕ್ರಿಕೆಟ್‌ ಸರಣಿಯ ಸೆಮಿಫೈನಲ್‌ನಲ್ಲಿ ಭಾರತ ಬದ್ದವೈರಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಗುರುವಾರ ಇಲ್ಲಿನ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ ಪಂದ್ಯ ನಡೆಯಲಿದೆ. ‘ಎ’ ಗುಂಪಿನಲ್ಲಿದ್ದ ಭಾರತ ಲೀಗ್‌ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

6 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಹೊಂದಿರುವ ಪಾಕಿಸ್ತಾನ, ಎದುರು ಸೆಣಸಲು ಸಜ್ಜಾಗಿದೆ. ಪಾಕ್‌ ವಿರುದ್ಧ ಗೆದ್ದು ಫೈನಲ್‌ಗೇರುವ ಉತ್ಸಾಹದಲ್ಲಿ ಭಾರತದ ಯುವ ಪಡೆ ಕಣಕ್ಕಿಳಿಯುತ್ತಿದೆ.

ಭಾರತ ತಂಡ:
ಜಯಂತ್ ಯಾದವ್(ನಾಯಕ), ಅಥರ್ವ ಟೈಡೆ, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣ, ಹಿಮ್ಮತ್ ಸಿಂಗ್, ದೀಪಕ್ ಹೂಡ,  ಪ್ರಭ್ ಸಿಮ್ರನ್ ಸಿಂಗ್, ಶ್ಯಾಮ್ಸ್ ಮುಲಾನಿ, ಶಿವಂ ಮಾವಿ, ಸಿದ್ದಾರ್ಥ್ ದೇಸಾಯಿ, ಪ್ರಸಿದ್ಧ್ ಕೃಷ್ಣ, ಮಯಾಂಕ್ ಮಾರ್ಕಂಡೆ, ಅಂಕುಶ್ ಬೈನ್ಸ್, ಅಂಕಿತ್ ರಜಪೂತ್, ಅತಿಥ್ ಸೇಥ್