ಕೊಲಂಬೊ(ಸೆ.12): ಅಂಡರ್ 19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಇಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾವನ್ನು ಎದುರಿಸಲಿದೆ.  ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ತಡವಾಗಿ ಆರಂಭವಾಗುವ ಸಾಧ್ಯತೆಯಿದೆ. 

ಅಂಡರ್‌ 19 ಏಷ್ಯಾಕಪ್‌: ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

‘ಎ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲಿ ಜಯಭೇರಿ ಬಾರಿಸಿ ಅಗ್ರಸ್ಥಾನ ಪಡೆದ ಭಾರತ ತಂಡ, ‘ಬಿ’ ಗುಂಪಿನ 2ನೇ ಸ್ಥಾನಿಯಾಗಿರುವ ಲಂಕಾ ಎದುರು ಗೆಲುವಿನ ಲೆಕ್ಕಾಚಾರದಲ್ಲಿ ಕಣಕ್ಕಿಳಿಯುತ್ತಿದೆ. ಭಾರತ ತಂಡವನ್ನು ಧೃವ್ ಜುರೇಲ್ ಮುನ್ನಡೆಸುತ್ತಿದ್ದಾರೆ. 

ಭಾರತ ಎ, ಅಂಡರ್-19 ಕೋಚ್ ಸ್ಥಾನಕ್ಕೆ ದ್ರಾವಿಡ್ ಗುಡ್‌ಬೈ; ಹೊಸಬರಿಗೆ ಮಣೆ!

ಮತ್ತೊಂದು ಸೆಮೀಸ್‌ನಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ಎದುರು ಸೆಣಸಲಿದೆ. ಎರಡೂ ಪಂದ್ಯಗಳು ಈ ಮೊದಲು ನಿಗದಿಯಂತೆ ಬೆಳಗ್ಗೆ 9.30ಕ್ಕೆ ನಡೆಯಬೇಕಿತ್ತು. ಆದರೆ ನಿರಂತರವಾಗಿ ಮಳೆ ಸುರಿಯುತ್ತಿದ್ದುರಿಂದ ಕೆಲಕಾಲ ಮುಂದೂಡಲಾಗಿದೆ.  ಶನಿವಾರ ಫೈನಲ್ ನಡೆಯಲಿದೆ.