ತಲಾ 3 ಏಕದಿನ ಹಾಗೂ 3 ಟಿ20 ಸರಣಿಗೆ ಈ ಮೊದಲು 9 ಆಟಗಾರರನ್ನೊಳಗೊಂಡ ನ್ಯೂಜಿಲ್ಯಾಂಡ್ ತಂಡವು ನಿನ್ನೆಯಷ್ಟೇ ಭಾರತಕ್ಕೆ ಬಂದಿಳಿದಿತ್ತು.

ಮುಂಬೈ(ಅ.14): ಭಾರತ ವಿರುದ್ಧದ ಸೀಮಿತ ಓವರ್'ಗಳ ಟೂರ್ನಿಗೆ ನ್ಯೂಜಿಲೆಂಡ್ ಪೂರ್ಣ ತಂಡವನ್ನು ಪ್ರಕಟಿಸಲಾಗಿದ್ದು, ಇಬ್ಬರು ಯುವ ಕ್ರಿಕೆಟಿಗರು ಟೀಂ ಇಂಡಿಯಾ ವಿರುದ್ಧ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

Add Asianetnews Kannada as a Preferred SourcegooglePreferred

ಹೌದು, ತಲಾ 3 ಏಕದಿನ ಹಾಗೂ 3 ಟಿ20 ಸರಣಿಗೆ ಈ ಮೊದಲು 9 ಆಟಗಾರರನ್ನೊಳಗೊಂಡ ನ್ಯೂಜಿಲ್ಯಾಂಡ್ ತಂಡವು ನಿನ್ನೆಯಷ್ಟೇ ಭಾರತಕ್ಕೆ ಬಂದಿಳಿದಿತ್ತು. ಇದೀಗ ನ್ಯೂಜಿಲೆಂಡ್ 'ಎ' ತಂಡದಲ್ಲಿ ಆಡುತ್ತಿದ್ದ 6 ಮಂದಿ ಆಟಗಾರರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿದೆ.

ನ್ಯೂಜಿಲೆಂಡ್ ಯುವ ಆಟಗಾರರಾದ ಗ್ಲೆನ್ ಫಿಲಿಪ್ಸ್ ಹಾಗೂ ಟೊಡ್ ಆ್ಯಸ್ಟಲ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ಪಾದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನುಳಿದಂತೆ ಮ್ಯಾಟ್ ಹೆನ್ರಿ, ಹೆನ್ರಿ ನಿಕೊಲಾಸ್, ಕಾಲಿನ್ ಮನ್ರೊ ಹಾಗೂ ಜಾರ್ಜ್ ವರ್ಕರ್ ತಂಡ ಕೂಡಿಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡ ಹೀಗಿದೆ:

ಕೇನ್ ವಿಲಿಯಮ್ಸನ್(ನಾಯಕ), ಟೊಡ್ ಆ್ಯಸ್ಟಲ್, ಟ್ರೆಂಟ್ ಬೌಲ್ಟ್, ಟಾಮ್ ಬ್ರೌಸ್, ಕಾಲಿನ್ ಡಿ ಗ್ರಾಂಡ್'ಹೋಂ, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೊಲಸ್, ಆ್ಯಡಂ ಮಿಲ್ನೆ, ಕಾಲಿನ್ ಮನ್ರೊ, ಗ್ಲೇನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್, ಇಶ್ ಸೋದಿ, ಟೀಮ್ ಸೌಥಿ.