ಬಾಂಗ್ಲವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾ

First Published 8, Mar 2018, 8:54 PM IST
Unadkat and Shankar keep BAN to 139
Highlights

ಮೊದಲ ಕ್ರಮಾಂಕದ ಆಟಗಾರ ಲಿಟನ್ ದಾಸ್(34) ಹಾಗೂ ಆಲ್'ರೌಂಡರ್ ಶಬ್ಬೀರ್ ರೆಹಮಾನ್(30) ಅವರ ಆಟದಿಂದ 20 ಓವರ್'ಗಳಲ್ಲಿ 139/8 ರನ್ ಗಳಿಸಿತು.

ಕೊಲಂಬೊ(ಮಾ.08): ನಿದಹಾಸ್ ಟ್ರೋಫಿಯ ತ್ರಿಕೋನ ಸರಣಿಯ 2ನೇ ಲಿಗ್ ಪಂದ್ಯದಲ್ಲಿ ಟೀಂ ಇಂಡಿಯಾ ಉನಾದಕ್ಟ್ 38/3 ಹಾಗೂ ವಿಜಯ್ ಶಂಕರ್ 32/2 ಅವರ ನೆರವಿನಿಂದ ಬಾಂಗ್ಲಾದೇಶ ತಂಡವನ್ನು 139 ರನ್'ಗಳಿಗೆ ಕಟ್ಟಿಹಾಕಿದರು.

 ಟಾಸ್ ಗೆದ್ದ ರೋಹಿತ್ ಶರ್ಮಾ ಮೊಹಮದ್ದುಲ್ಲ ಪಡೆಯನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ಆರಂಭಿಕ ಆಟಗಾರರಾದ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್  5 ಓವರ್'ಗಳಲ್ಲಿ ಕೇವಲ 35 ರನ್ ಗಳಿಸಿದರು. ಇವರಿಬ್ಬರನ್ನು ಶಾರ್ದೂಲ್ ಠಾಕೂರ್, ಉನಾದಕ್ಟ್  ಪೆವಿಲಿಯನ್'ಗೆ ಕಳಿಸಿದರು. ವಿಕೇಟ್ ಕೀಪರ್ ಎಂ. ರೆಹಮಾನ್(18) ರನ್ ಗಳಿಸಿ ಶಂಕರ್ ಬೌಲಿಂಗ್'ನಲ್ಲಿ ಔಟಾದರು.  

ಮೊದಲ ಕ್ರಮಾಂಕದ ಆಟಗಾರ ಲಿಟನ್ ದಾಸ್(34) ಹಾಗೂ ಆಲ್'ರೌಂಡರ್ ಶಬ್ಬೀರ್ ರೆಹಮಾನ್(30) ಅವರ ಆಟದಿಂದ 20 ಓವರ್'ಗಳಲ್ಲಿ 138 ರನ್ ಗಳಿಸಿತು. ಭಾರತದ ಪರ ಉನಾದಕ್ಟ್ 38/3, ವಿಜಯ್ ಶಂಕರ್ 32/2 ಹಾಗೂ ಠಾಕೂರ್ ಚಾಹಲ್ ತಲಾ ಒಂದೊಂದು ವಿಕೇಟ್ ಗಳಿಸಿದರು.

ಸ್ಕೋರ್

ಬಾಂಗ್ಲಾದೇಶ 20 ಓವರ್'ಗಳಲ್ಲಿ 139/8

(ಲಿಂಟನ್ ದಾಸ್ 34, ಶಬ್ಬೀರ್ ರೆಹಮಾನ್ 30, ಉನಾದಕ್ಟ್ 38/3, ವಿಜಯ್ ಶಂಕರ್ 32/2)

ವಿವರ ಅಪೂರ್ಣ

loader