ಲಂಡನ್(ಆ.16): ಕ್ರಿಕೆಟ್ ಜಂಟ್ಲಮೆನ್ ಗೇಮ್ ಮಾತ್ರವಲ್ಲ, ಡೇಂಜರಸ್ ಗೇಮ್ ಕೂಡ ಹೌದು.  ಅದರಲ್ಲೂ ಟಿ20 ಕ್ರಿಕೆಟ್ ಆರಂಭವಾದ  ಬಳಿಕ ಕ್ರಿಕೆಟ್ ಮತ್ತಷ್ಟು ಅಪಾಯಕಾರಿಯಾಗಿದೆ. ಹೊಡಿ ಬಡಿ ಆಟದಿಂದ ಆಟಗಾರ ಪ್ರಾಣಕ್ಕೆ ಅಪಾಯಕ್ಕೂ ಅಪಾಯ ಎದುರಾಗಿದೆ. ಇದೀಗ ಇದೇ ರೀತಿ ಬ್ಯಾಟ್ಸ್‌ಮನ್ ಹೊಡೆತಕ್ಕೆ ಅಂಪೈರ್ ಪ್ರಾಣ ಕಳೆದುಕೊಂಡಿದ್ದಾರೆ.

 

ಇದನ್ನೂ ಓದಿ:  3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

ಪೆಂಬ್ರೋಕ್‌ಶೈರ್ ಕಂಟ್ರಿ ಕ್ರಿಕೆಟ್ ಕ್ಲಬ್ ಅಂಪೈರ್ ಜಾನ್ ವಿಲಿಯಮ್ಸ್(80) ತಲೆಗೆ ಬಾಲ್ ಬಡಿದ ಕಾರಣ ಅಂಪೈರ್ ಅಸುನೀಗಿದ್ದಾರೆ. ಪೆಂಬ್ರೋಕ್ ಹಾಗೂ ನಾರ್‍‌ಬರ್ತ್ ತಂಡದ ನಡುವಿನ ಕೌಂಟಿ  ಪಂದ್ಯಕ್ಕೆ ಜಾನ್ ವಿಲಿಯಮ್ಸ್ ಅಂಪೈರಿಂಗ್ ಮಾಡುತ್ತಿದ್ದರು. ಈ ವೇಳೆ ಬ್ಯಾಟ್ಸ್‌ಮನ್ ಭರ್ಜರಿ ಹೊಡೆತವೊಂದು ಅಂಪೈರ್ ತಲೆಗೆ ಬಡಿದಿದೆ.

ಇದನ್ನೂ ಓದಿ:  8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

ಬಾಲ್ ಬಡಿದ ರಭಸಕ್ಕೆ ಅಂಪೈರ್ ಮೈದಾನಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯರು ಮೈದಾನಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಗಂಭೀರ ಗಾಯವಾದ ಕಾರಣ ತಕ್ಷಣ ವೇಲ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಜಾನ್ ವಿಲಿಯಮ್ಸ್, ಅಸುನೀಗಿದ್ದಾರೆ. 

ಬೌಲರ್‌ಗಳ ಬೌನ್ಸರ್ ಎಸೆತ, ಬ್ಯಾಟ್ಸ‌ಮನ್ ಹೊಡೆತಕ್ಕೆ ಹಲವರು ಮೈದಾನದಲ್ಲಿ ನಿಧನರಾಗಿದ್ದಾರೆ. 1624ರಲ್ಲಿ ಬ್ಯಾಟ್ಸ್‌ಮನ್ ಜಾಸ್ಪರ್ ವಿನಲ್ ತಲೆಗೆ ಬಾಲ್ ಬಡಿದು ಸಾವನ್ನಪ್ಪಿದ್ದರು. ಇದಾದ ಬಳಿಕ ರಮನ್ ಲಾಂಬ, ಫಿಲಿಪ್ ಹ್ಯೂಸ್, ಡರೆನ್ ರಂಡಾಲ್ ಬೌಲರ್ ಎಸೆತ ತಲೆಗೆ ಬಡಿದು ಸಾವನ್ನಪ್ಪಿದ್ದಾರೆ.