ಉಮರ್ ಅಕ್ಮಲ್ ಅವರ ಜಾಗದಲ್ಲಿ ಹ್ಯಾರಿಸ್ ಸೋಹೆಲ್ ಅಥವಾ ಉಮರ್ ಅಮೀನ್ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಇಂಜುಮಾಮ್ ಉಲ್ ಹಕ್ ಹೇಳಿದ್ದಾರೆ.

ಲಂಡನ್(ಮೇ.22): ಮುಂದಿನ ತಿಂಗಳಿಂದ ಇಂಗ್ಲೆಂಡ್‌'ನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದ ಉಮರ್ ಅಕ್ಮಲ್, 2ನೇ ಫಿಟ್ನೆಸ್ ಟೆಸ್ಟ್‌ನಲ್ಲಿಯೂ ವಿಫಲರಾಗಿದ್ದರಿಂದ ತಂಡದಿಂದ ಹೊರಗುಳಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಮರ್ ಅಕ್ಮಲ್ ಅವರ ಜಾಗದಲ್ಲಿ ಹ್ಯಾರಿಸ್ ಸೋಹೆಲ್ ಅಥವಾ ಉಮರ್ ಅಮೀನ್ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಇಂಜುಮಾಮ್ ಉಲ್ ಹಕ್ ಹೇಳಿದ್ದಾರೆ.

ಹ್ಯಾರಿಸ್ ಮತ್ತು ಅಮೀನ್ ಪಾಕಿಸ್ತಾನ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನದಿಂದ ಗಮನಸೆಳೆದಿದ್ದರು. ಫಿಟ್ನೆಸ್ ಟೆಸ್ಟ್‌'ನಲ್ಲಿ ವೈಫಲ್ಯ ಕಂಡಿರುವ ಉಮರ್ ಅಕ್ಮಲ್ ಶೀಘ್ರದಲ್ಲಿ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದು ಪಿಸಿಬಿ ಅಧ್ಯಕ್ಷ ಶಹರಿಯಾರ್ ಖಾನ್ ಹೇಳಿದ್ದಾರೆ.