ಸೌತ್ ಆಫ್ರಿಕಾ ಕ್ರಿಕೆಟಿಗರ ಮೇಲೆ ಅಪರಿಚಿತರ ದಾಳಿ- ಗಂಭೀರ ಗಾಯ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 4:32 PM IST
Two South African cricketers beaten brutally by thugs in UK
Highlights

ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲು ಬಂದ ಸೌತ್ಆಫ್ರಿಕಾ ಇಬ್ಬರು ಯುವ ಕ್ರಿಕೆಟಿಗರ ಮೇಲೆ 7 ಜನರ ಅಪರಿಚಿತ ಗುಂಪು ದಾಳಿ ಮಾಡಿದೆ. ಕ್ರಿಕೆಟಿಗರಿಗೆ ಹಿಗ್ಗಾ ಮುಗ್ಗ ಥಳಿಸಿ ಪರಾರಿಯಾಗಿರೋ  ಅಪರಿಚಿತರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ವಿವರ.

ಲಂಡನ್(ಆ.08): ನೈಟ್ ಕ್ಲಬ್ ಪಾರ್ಟಿ ಮುಗಿಸಿ ವಾಪಾಸ್ಸಾಗುತ್ತಿದ್ದ ಸೌತ್ಆಫ್ರಿಕಾ ಯುವ ಕ್ರಿಕೆಟಿಗರಿಬ್ಬರ ಮೇಲೆ ಅಪರಿಚಿತರ ಗುಂಪೊಂದು ದಾಳಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಲಂಡನ್‌ನ ಯಾರ್ಕ್‌ಶೈರ್ ಸ್ಟ್ರೀಟ್‌ನಲ್ಲಿ ನಡೆದಿದೆ.

ಶಾ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವ ಸೌತ್ಆಫ್ರಿಕಾ ಮೂಲದ ಜಸ್ಟಿನ್ ವ್ಯಾಟ್ಸನ್ ಹಾಗೂ ಮಾರ್ಕ್ಯೂಸ್ ಆಕರ್ಮ್ಯಾನ್ ಮೇಲೆ 7 ಜನರ ಅಪರಿಚಿತರ ಗುಂಪು ದಾಳಿ ಮಾಡಿದೆ. ಮಧ್ಯರಾತ್ರಿ ಇಬ್ಬರು ಕ್ರಿಕೆಟಿಗರನ್ನ ಥಳಿಸಿದ ಗುಂಪು ಪರಾರಿಯಾಗಿದೆ. ಪ್ರಜ್ಞೆ ತಪ್ಪಿ ಬಿದ್ದ ಸೌತ್ಆಫ್ರಿಕಾ ಕ್ರಿಕೆಟಿಗರನ್ನ ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ.

ಗಂಭೀರ ಗಾಯಗೊಂಡಿರುವ ಜಸ್ಟಿನ್ ವ್ಯಾಟ್ಸನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಷ್ಟೇ ಅಲ್ಲ, ಗಾಯದಿಂದಾಗಿ ಕ್ರಿಕೆಟ್ ಕರಿಯರ್ ಅಂತ್ಯವಾಗೋ ಭೀತಿಯಲ್ಲಿದ್ದಾರೆ.  ಮತ್ತೊರ್ವ ಕ್ರಿಕೆಟಿಗ ಮಾರ್ಕ್ಯೂಸ್ ಚೇತರಿಸಿಕೊಳ್ಳುತ್ತಿದ್ದು, ಕನಿಷ್ಠ 3 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.
 

loader