ನೇಗಿ ಎಸೆದ ಮೊದಲ ಎಸೆತದಲ್ಲೇ ಡೇಂಜರ್ ಬ್ಯಾಟ್ಸ್'ಮ್ಯಾನ್ ರಿಶಬ್ ಪಂತ್ ಬೌಲ್ಡ್ ಆದರು. ಆಲ್ಲಿಗೆ ಪಂದ್ಯ ಬಹುತೇಕ ಆರ್'ಸಿಬಿ ಪರ ವಾಲಿತು. ಇನ್ನೆರಡು ಎಸೆತದಲ್ಲಿ ಶಹಬಾಜ್ ನದೀಮ್ ಕೂಡ ವಿಕೆಟ್ ಒಪ್ಪಿಸಿದರು. ನೇಗಿ ಆ ಓವರ್'ನಲ್ಲಿ ಕೇವಲ 3 ರನ್ನಿತ್ತು 2 ವಿಕೆಟ್ ಸಂಪಾದಿಸಿದರು. ಆರ್'ಸಿಬಿ 15 ರನ್'ಗಳಿಂದ ಗೆಲುವು ಪಡೆಯಿತು.

ಬೆಂಗಳೂರು(ಏ. 09): ಕೇದಾರ್ ಜಾಧವ್ ಬ್ಯಾಟಿಂಗ್ ಧಮಾಕ ಮತ್ತು ಶೇನ್ ವ್ಯಾಟ್ಸನ್ ಕ್ಯಾಪ್ಟನ್ಸಿ ನಿನ್ನೆ ಆರ್'ಸಿಬಿಗೆ ಗೆಲುವು ತಂದಿತ್ತ ಪಂದ್ಯದ ಹೈಲೈಟ್ಸ್. ಆದರೆ, ಪಂದ್ಯದುದ್ದಕ್ಕೂ ಡೆಲ್ಲಿಯತ್ತ ಸರಿಯುತ್ತಿದ್ದ ಗೆಲುವಿನ ದಾರಿಯನ್ನು ಬೆಂಗಳೂರಿಗೆ ತಿರುಗಿಸಿದ್ದು ಕೊನೆಯ ಎರಡು ಓವರ್ ಎಂಬುದು ಸ್ಪಷ್ಟ. ರಿಷಭ್ ಪಂತ್ ಕ್ರೀಸ್'ನಲ್ಲಿದ್ದಷ್ಟೂ ಹೊತ್ತು ಆರ್'ಸಿಬಿಗೆ ಜಯಮಾಲೆ ಸಾಧ್ಯವೇ ಇಲ್ಲದಂಥ ಸ್ಥಿತಿ. ಆದರೆ, ಎಲ್ಲವೂ ಬದಲಾಗಿಹೋಯಿತು ಆ ಎರಡು ಓವರ್'ನಲ್ಲಿ.

ಹೇಗಿತ್ತು ಆ 2 ಓವರ್?
ಡೆಲ್ಲಿ ಡೇರ್'ಡೆವಿಲ್ಸ್ ತಂಡ ಗೆಲ್ಲಲು ಕೊನೆಯ 2 ಓವರ್'ನಲ್ಲಿ ಬೇಕಿದ್ದದ್ದು ಕೇವಲ 21 ರನ್ ಮಾತ್ರ. ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್'ನಲ್ಲಿದ್ದ ರಿಶಭ್ ಪಂತ್ ಆರ್'ಸಿಬಿ ಪಾಲಿಗೆ ವಿಲನ್ ಆಗಿ ಉಳಿದಿದ್ದರು. ನಾಯಕ ಶೇನ್ ವ್ಯಾಟ್ಸನ್ 19ನೇ ಓವರ್ ಬೌಲ್ ಮಾಡಿದರು. ವ್ಯಾಟ್ಸನ್ ತಮ್ಮ ಬೌಲಿಂಗ್ ವೇರಿಯೇಶನ್'ನಿಂದ ಅಮಿತ್ ಮಿಶ್ರಾರನ್ನು ಕಟ್ಟಿಹಾಕಿದರು. ಓ ಓವರ್'ನಲ್ಲಿ ಬಂದದ್ದು ಕೇವಲ 2 ರನ್ ಮಾತ್ರ. ಕೊನೆಯ ಓವರ್'ನಲ್ಲಿ 19 ರನ್ ಬೇಕು. ಕ್ರೀಸ್'ನಲ್ಲಿ ರಿಶಬ್ ಪಂತ್ ಇದ್ದರು. ಒಂದೆರಡು ಸಿಕ್ಸರ್ ಭಾರಿಸಿದರೆ ಪಂದ್ಯಕ್ಕೆ ಸುಲಭವಾಗಿ ಟ್ವಿಸ್ಟ್ ಸಿಕ್ಕುವಂತಿತ್ತು. ಇಂಥ ಸಮಯದಲ್ಲಿ ನಾಯಕ ಶೇನ್ ವಾಟ್ಸನ್ ಅವರು ಪವನ್ ನೇಗಿಗೆ ಚೆಂಡು ನೀಡಿದರು. ಆ ಪಂದ್ಯದಲ್ಲಿ ಅದೂವರೆಗೆ ಬೌಲಿಂಗ್ ಮಾಡಿದ್ದ ಸ್ಪಿನ್ನರ್ ಪವನ್ ನೇಗಿಗೆ ಕೊನೆಯ ಓವರ್ ಮಾಡಲು ಕೊಟ್ಟಿದ್ದು ಅನೇಕ ಹುಬ್ಬೇರಿಸಿತ್ತು. ಇಂಥದ್ದೊಂದು ಅಚ್ಚರಿಯ ನಿರ್ಧಾರ ಕೈಗೊಳ್ಳುವ ಧೈರ್ಯ ಧೋನಿಗೆ ಮಾತ್ರವೇ ಇರುವುದು. ವಾಟ್ಸನ್ ಕೈಗೊಂಡ ಈ ಅಚ್ಚರಿ ನಿರ್ಧಾರಕ್ಕೆ ಕೂಡಲೇ ಯಶಸ್ಸು ಸಿಕ್ಕಿತು. ನೇಗಿ ಎಸೆದ ಮೊದಲ ಎಸೆತದಲ್ಲೇ ಡೇಂಜರ್ ಬ್ಯಾಟ್ಸ್'ಮ್ಯಾನ್ ರಿಶಬ್ ಪಂತ್ ಬೌಲ್ಡ್ ಆದರು. ಆಲ್ಲಿಗೆ ಪಂದ್ಯ ಬಹುತೇಕ ಆರ್'ಸಿಬಿ ಪರ ವಾಲಿತು. ಇನ್ನೆರಡು ಎಸೆತದಲ್ಲಿ ಶಹಬಾಜ್ ನದೀಮ್ ಕೂಡ ವಿಕೆಟ್ ಒಪ್ಪಿಸಿದರು. ನೇಗಿ ಆ ಓವರ್'ನಲ್ಲಿ ಕೇವಲ 3 ರನ್ನಿತ್ತು 2 ವಿಕೆಟ್ ಸಂಪಾದಿಸಿದರು. ಆರ್'ಸಿಬಿ 15 ರನ್'ಗಳಿಂದ ಗೆಲುವು ಪಡೆಯಿತು.