ಅಖ್ತರ್ ಅವರ ಮಾರಕ ದಾಳಿಗೆ ಕೆಲವು ಬ್ಯಾಟ್ಸ್’ಮನ್’ಗಳು ತೀವ್ರ ಗಾಯಕ್ಕೆ ತುತ್ತಾಗಿದ್ದು ಇದೆ. 161 ಕಿ.ಮೀ ವೇಗದಲ್ಲಿ ಬೌಲಿಂಗ್ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದ ಅಖ್ತರ್ ಇದೀಗ ತಮ್ಮನ್ನು ತಾವು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಕರಾಚಿ[ಅ.08]: ರಾವಲ್’ಪಿಂಡಿ ಎಕ್ಸ್’ಪ್ರೆಸ್ ಖ್ಯಾತಿಯ ಶೊಯೆಬ್ ಅಖ್ತರ್ ತನ್ನನ್ನು ತಾನು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಅಪರೂಪದ ವೇಗಿ ಎಂದರೆ ಅತಿಶಯೋಕ್ತಿಯಲ್ಲ.
ಅಖ್ತರ್ ಅವರ ಮಾರಕ ದಾಳಿಗೆ ಕೆಲವು ಬ್ಯಾಟ್ಸ್’ಮನ್’ಗಳು ತೀವ್ರ ಗಾಯಕ್ಕೆ ತುತ್ತಾಗಿದ್ದು ಇದೆ. 161 ಕಿ.ಮೀ ವೇಗದಲ್ಲಿ ಬೌಲಿಂಗ್ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದ ಅಖ್ತರ್ ಇದೀಗ ತಮ್ಮನ್ನು ತಾವು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಹೌದು, ಕೆಲವರು ನನ್ನನ್ನು ಕ್ರಿಕೆಟ್’ನ ಡಾನ್ ಎಂದು ಕರೆಯುತ್ತಾರೆ. ಆದರೆ ಎದುರಾಳಿ ಬ್ಯಾಟ್ಸ್’ಮನ್’ಗಳನ್ನು ನೋವು ಮಾಡುವುದು ನನ್ನ ಉದ್ದೇಶವಲ್ಲ. ಒಂದಂತು ಸತ್ಯ ನನ್ನ ದೇಶಕ್ಕಾಗಿ ಆಡುವ ಸ್ಫೂರ್ತಿಯಲ್ಲಿ ಈ ರೀತಿಯ ಪ್ರದರ್ಶನ ನೀಡುತ್ತಿದ್ದೆ ಎಂದು ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.
ಅಖ್ತರ್ ಈ ರೀತಿಯ ಅಭಿಪ್ರಾಯವನ್ನು ಹೊರಹಾಕುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕ್ ವೇಗಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಟ್ರೋಲ್ ಮಾಡಿದ್ದಾರೆ. ಟ್ವಿಟರಿಗರು ಏನಂದ್ರು ನೀವೇ ನೋಡಿ...
