ಲಂಡನ್(ಆ.13): ಇಂಗ್ಲೆಂಡ್ ವಿರುದ್ಧ ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಹೀಗಾಗಿ  3ನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕಳಪೆ ಪ್ರದರ್ಶನ ನೀಡಿರುವ ವಿಕೆಟ್ ಕೀಪರ್  ದಿನೇಶ್ ಕಾರ್ತಿಕ್ ಬದಲು ಯುವ ಕ್ರಿಕೆಟಿಗ ರಿಷಬ್ ಪಂತ್‌ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. 

ದಿನೇಶ್ ಕಾರ್ತಿ ಮೊದಲ ಪಂದ್ಯದಲ್ಲಿ 20 ರನ್ ಸಿಡಿಸಿದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 1 ರನ್ ಗಳಿಸಿದ್ದಾರೆ. ಇದು ದಿನೇಶ್ ಕಾರ್ತಿಕ್ ಕೊನೆಯ ಟೆಸ್ಟ್ ಪಂದ್ಯ, ಮುಂದಿನ ಪಂದ್ಯದಲ್ಲಿ ರಿಷಭ್ ಪಂತ್ ಪಾದರ್ಪಣೆ ಮಾಡಲಿದ್ದಾರೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ಟ್ವಿಟರಿಗರ ಅಭಿಪ್ರಾಯ: