ಬಿಗ್ ಬಾಸ್ ಮನೆಯಲ್ಲಿ ವಿವಾದಿಂದಲೇ ದಿನದೂಡುತ್ತಿರುವ ಕ್ರಿಕೆಟಿಗ ಶ್ರೀಶಾಂತ್ ವಿರುದ್ದ ಇದೀಗ ಟ್ವಿಟರಿಗರು ತಿರುಗಿ ಬಿದ್ದಿದ್ದಾರೆ. ಅಷ್ಟಕ್ಕೂ ಕೇರಳ ಎಕ್ಸ್‌ಪ್ರೆಸ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?
ಮುಂಬೈ(ನ.02): ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಶ್ರೀಶಾಂತ್ ಕಾಲಿಟ್ಟಿದ್ದೇ ಮತ್ತೆ ವಿವಾದಗಳ ಕೇಂದ್ರ ಬಿಂದುವಾಗಿದ್ದಾರೆ. ಆರಂಭದಲ್ಲೇ ಬಿಗ್ ಬಾಸ್ ಮನೆ ತೊರೆಯುವುದಾಗಿ ಎಚ್ಚರಿಸಿದ್ದ ಶ್ರೀಶಾಂತ್ ಇದೀಗ ಅವಾಚ್ಯ ಶಬ್ದಗಳ ಬಳಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶ್ರೀಶಾಂತ್ ಪದ ಬಳಕೆ ಹಾಗೂ ನಡವಳಿಕೆಗೆ ಟ್ವಿಟರಿಗರು ಬೇಸತ್ತಿದ್ದಾರೆ. ಇಷ್ಟೇ ಅಲ್ಲ ಬಿಗ್ ಬಾಸ್ ಮನೆಯಿಂದ ಶ್ರೀಶಾಂತ್ ಹೊರಹಾಕಿ ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
