ಬೆಂಗಳೂರು[ಸೆ.21] ಬಾಲಿವುಡ್ ನಟಿಯೊಂದಿಗೆ ಹೆಸರು ಕೇಳಿ ಬಂದಿದ್ದ ಟೀ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರನ್ನು ಕಿತ್ತುಹಾಕಬೇಕು ಎಂದು ಜಾಲತಾಣಿಗರು ಅಗ್ರಹಿಸಿದ್ದಾರೆ. #SackRaviShastri  ಟ್ರೆಂಡ್ ಆಗುತ್ತಲೇ ಇದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಸದಸ್ಯ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. 'ಏರ್‌ಲಿಫ್ಟ್', 'ಲಂಚ್ ಬಾಕ್ಸ್'ನಂಥ ಚಲನಚಿತ್ರಗಳಲ್ಲಿನ ಪಾತ್ರಗಳಿಂದಾಗಿ ಪ್ರಸಿದ್ಧಿಗೆ ಬಂದಿದ್ದ 36 ವರ್ಷದ ನಿಮ್ರತ್ ಹಾಗೂ 56 ವರ್ಷದ ರವಿ ಶಾಸ್ತ್ರಿ ಖಾಸಗಿ ಕಂಪನಿಯ ರಾಯಭಾರಿಗಳಾಗಿದ್ದ ಸಂದರ್ಭ ಇಬ್ಬರ ನಡುವೆ ಸ್ನೇಹ ಚಿಗುರಿತ್ತು.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಭಾರತ ಸೋಲು ಕಂಡಾಗ ರವಿ ಶಾಸ್ತ್ರಿ ಅವರನ್ನು ಕಿತ್ತು ಹಾಕಬೇಕು ಎಂಬ ಕೂಗು ಜೋರಾಗಿಯೇ ವ್ಯಕ್ತವಾಗಿತ್ತು. ಈಗ ಕಾರಣವಿಲ್ಲದ ಕಾರಣಕ್ಕೆ ಶಾಸ್ತ್ರಿ ಟ್ರೆಂಟ್ ಆಗಿದ್ದಾರೆ.