ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಆದರೆ ಕನ್ನಡಿಗ ಮನೀಶ್ ಪಾಂಡೆ ಸೇರಿದಂತೆ ಹಲವು ಕ್ರಿಕೆಟಿಗರನ್ನ ಕೈಬಿಟ್ಟಿರೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
ಮುಂಬೈ(ಡಿ.24): ಆಸ್ಟ್ರೇಲಿಯಾ ಪ್ರವಾಸ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಕಿವಿಸ್ ವಿರುದ್ದದ 3 ಟಿ20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಕನ್ನಡಿಗ ಮನೀಶ್ ಪಾಂಡೆಗೆ ಸ್ಥಾನ ಕಲ್ಪಿಸಿಲ್ಲ. ಇದೀಗ ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಿವಿಸ್, ಆಸಿಸ್ ODIs,T20 ಸರಣಿಗೆ ಟೀಂ ಇಂಡಿಯಾ ಪ್ರಕಟ!
ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮನೀಶ್ ಪಾಂಡೆಗೆ ಅವಕಾಶ ನೀಡಬೇಕಿತ್ತು ಎಂದು ಟ್ವಿಟರಿಗರು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೇ ಅಲ್ಲ ಸುರೇಶ್ ರೈನಾ ಹಾಗೂ ಶ್ರೇಯಸ್ ಅಯ್ಯರ್‌ಗೂ ಸ್ಥಾನ ಕಲ್ಪಿಸಬೇಕಿತ್ತು ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟಿ20 ಸರಣಿಗೆ ಸುರೈಶ್ ರೈನಾಗಿಲ್ಲ ಸ್ಥಾನ-ಟ್ವಿಟರಿಗರಿಂದ ಕ್ಲಾಸ್!
