ಕ್ರಿಸ್ ಗೇಲ್ ಗುಜರಾತ್ ಲಯನ್ಸ್ ವಿರುದ್ಧದ ಸ್ಫೋಟಕ ಇನಿಂಗ್ಸ್ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...
ರಾಜ್'ಕೋಟ್(ಏ.18): ವೆಸ್ಟ್'ಇಂಡೀಸ್ ದೈತ್ಯ ಕ್ರಿಸ್ ಗೇಲ್ ಟಿ20 ಮಾದರಿ ಕ್ರಿಕೆಟ್'ನಲ್ಲಿ 10 ಸಾವಿರ ರನ್ ದಾಖಲಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದ್ದಾರೆ.
ಗುಜುರಾತ್ ಲಯನ್ಸ್ ವಿರುದ್ಧ ಆರ್'ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಗೇಲ್ ಮನಮೋಹಕ ಇನಿಂಗ್ಸ್ ಕಟ್ಟಿದರು. ಐಪಿಎಲ್'ನ ಆರಂಭದ ಪಂದ್ಯಗಳಲ್ಲಿ ಮಂಕಾಗಿದ್ದ ಗೇಲ್ ಬ್ಯಾಟ್, ಇಂದು ಅಕ್ಷರಶಃ ಘರ್ಜಿಸಿತು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗೇಲ್ 38 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಏಳು ಸಿಕ್ಸರ್'ಗಳ ನೆರವಿನಿಂದ 77ರನ್ ಸಿಡಿಸಿದರು.
ಕ್ರಿಸ್ ಗೇಲ್ ಗುಜರಾತ್ ಲಯನ್ಸ್ ವಿರುದ್ಧದ ಸ್ಫೋಟಕ ಇನಿಂಗ್ಸ್ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ....
