ವಿರಾಟ್ ಕೊಹ್ಲಿ ಕೇವಲ 119 ಇನ್ನಿಮಗ್ಸ್’ಗಳಲ್ಲಿ 54.54ರ ಸರಾಸರಿಯಲ್ಲಿ 6000 ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎನ್ ರಿಚರ್ಡ್ಸ್ ಅವರಿಗಿಂತ ವೇಗವಾಗಿ ಆರು ಸಾವಿರ ರನ್ ಪೂರೈಸಿದ್ದಾರೆ.
ಸೌತಾಂಪ್ಟನ್[ಆ.31]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಆರು ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ 6 ಸಾವಿರ ರನ್ ಪೂರೈಸಿದ ಭಾರತದ 10ನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಕೇವಲ 119 ಇನ್ನಿಮಗ್ಸ್’ಗಳಲ್ಲಿ 54.54ರ ಸರಾಸರಿಯಲ್ಲಿ 6000 ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎನ್ ರಿಚರ್ಡ್ಸ್ ಅವರಿಗಿಂತ ವೇಗವಾಗಿ ಆರು ಸಾವಿರ ರನ್ ಪೂರೈಸಿದ್ದಾರೆ.
ವಿರಾಟ್ ಕೊಹ್ಲಿಯ ಸಾಧನೆಯನ್ನು ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಟ್ವಿಟರ್ ಮೂಲಕ ಗುಣಗಾನ ಮಾಡಿದ್ದಾರೆ.