ಬಿಸಿಸಿಐನ ನೂತನ ನಿಯಮದ ಪ್ರಕಾರ ವಿದೇಶಿ ಪ್ರವಾಸದ ವೇಳೆ ಕ್ರಿಕೆಟಿಗರ ಪತ್ನಿಯರು ಕೇವಲ 2 ವಾರಗಳ ಕಾಲ ಮಾತ್ರ ಜತೆಗಿರಲು ಅವಕಾಶವಿದೆ. ಈ ನಿಯಮವನ್ನು ಸಡಿಲಗೊಳಿಸಬೇಕು ಎಂದು ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ವೆಸ್ಟ್ ಇಂಡೀಸ್ ಸರಣಿ ಬಳಿಕ ಭಾರತ ತಂಡವು ಸುಮಾರು ಮೂರು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.
ನವದೆಹಲಿ[ಅ.07]: ವಿದೇಶಿ ಪ್ರವಾಸ ಮಾಡುವ ಸಂದರ್ಭದಲ್ಲಿ ಆಟಗಾರರ ಪತ್ನಿಯರು ಹೆಚ್ಚು ಕಾಲ ಜತೆಗಿರಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬಿಸಿಸಿಐನ ನೂತನ ನಿಯಮದ ಪ್ರಕಾರ ವಿದೇಶಿ ಪ್ರವಾಸದ ವೇಳೆ ಕ್ರಿಕೆಟಿಗರ ಪತ್ನಿಯರು ಕೇವಲ 2 ವಾರಗಳ ಕಾಲ ಮಾತ್ರ ಜತೆಗಿರಲು ಅವಕಾಶವಿದೆ. ಈ ನಿಯಮವನ್ನು ಸಡಿಲಗೊಳಿಸಬೇಕು ಎಂದು ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ವೆಸ್ಟ್ ಇಂಡೀಸ್ ಸರಣಿ ಬಳಿಕ ಭಾರತ ತಂಡವು ಸುಮಾರು ಮೂರು ತಿಂಗಳುಗಳ ಕಾಲ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಪತ್ನಿಯರು ಜತೆ ಇರಲು ಅವಕಾಶ ಕಲ್ಪಿಸಬೇಕು ಎಂದು ವಿರಾಟ್ ಮನವಿ ಮಾಡಿದ್ದಾರೆ.
ಇದನ್ನು ಓದಿ:ಪತ್ನಿಯರಿಗಾಗಿ ಹೋರಾಟ-ಬಿಸಿಸಿಐಗೆ ಮನವಿ ಸಲ್ಲಿಸಿದ ವಿರಾಟ್!
ಈಗಾಗಲೇ ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ತೋರಿ ವ್ಯಾಪಕ ಟೀಕೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಗುರಿಯಾಗಿದ್ದರು. ಅದರಲ್ಲೂ ಲಂಡನ್ ಹೈಕಮಿಷನ್ ಕಚೇರಿಯಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದು ಕೂಡಾ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದೀಗ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಈ ಕುರಿತಂತೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿತ್ತು ಅಂತ ನೀವೇ ನೋಡಿ...
