ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು.
ದುಬೈ[ಸೆ.18]: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಆಕರ್ಷಕ ಶತಕದ ನೆರವಿನಿಂದ ಹಾಂಕಾಂಗ್ ವಿರುದ್ಧ ಭಾರತ 7 ವಿಕೆಟ್ ಕಳೆದುಕೊಂಡು 285 ರನ್ ಬಾರಿಸಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಬರ ಅನುಭವಿಸಿದ್ದ ಧವನ್ ಕೊನೆಗೂ ಮೂರಂಕಿ ಮೊತ್ತ ಮುಟ್ಟುವಲ್ಲಿ ಸಫಲರಾಗಿದ್ದಾರೆ. ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು.
ಧವನ್ ಅವರ ಸಮಯೋಚಿತ ಶತಕದ ಬಗ್ಗೆ ಟ್ವಿಟರಿಗರು ಏನಂದ್ರು ಅಂತ ನೀವೇ ನೋಡಿ..
