ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್-ರೋಹಿತ್ ಜೋಡಿ ಶತಕದ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಧವನ್ 43 ರನ್ ಸಿಡಿಸಿದರೆ, ರೋಹಿತ್ ಅಜೇಯ 111 ರನ್ ಚಚ್ಚಿದರು.

ಬೆಂಗಳೂರು[ನ.07]: ರೋಹಿತ್ ಶರ್ಮಾ ದಾಖಲೆಯ ಶತಕ ಹಾಗೂ ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ ಟಿ20 ಸರಣಿ ಜಯಿಸಿದೆ. ಈ ಮೂಲಕ ದೇಶದ ಜನತೆಗೆ ರೋಹಿತ್ ದೀಪಾವಳಿಗೆ ಉಡುಗೊರೆ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್-ರೋಹಿತ್ ಜೋಡಿ ಶತಕದ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಧವನ್ 43 ರನ್ ಸಿಡಿಸಿದರೆ, ರೋಹಿತ್ ಅಜೇಯ 111 ರನ್ ಚಚ್ಚಿದರು. ಇವರಿಗೆ ಕೊನೆಯಲ್ಲಿ ಕೆ.ಎಲ್ ರಾಹುಲ್ 26 ರನ್ ಸಿಡಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ಇದಕುತ್ತರವಾಗಿ ವಿಂಡೀಸ್ ಪಡೆ ಕೇವಲ 124 ರನ್ ಗಳಿಸುವಷ್ಟರಲ್ಲೇ ಶಕ್ತವಾಯಿತು. ಡ್ಯಾರನ್ ಬ್ರಾವೋ[23] ಹಾಗೂ ಕಿಮೋ ಪೌಲ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಕುಲ್ದೀಪ್, ಖಲೀಲ್, ಭುವಿ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಸರಣಿ ಜಯಿಸಿದೆ. ಟೀಂ ಇಂಡಿಯಾದ ಈ ಪ್ರದರ್ಶನದ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ..

Scroll to load tweet…
Scroll to load tweet…
Scroll to load tweet…
Scroll to load tweet…