ನಾಗ್ಪುರ[ಮಾ.05]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ಬೇಟೆ ಮುಂದುವರೆಸಿದ್ದು, ಏಕದಿನ ಕ್ರಿಕೆಟ್’ನಲ್ಲಿ 40ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಆಸಿಸ್ ಗೆಲುವಿಗೆ 251 ರನ್ ಟಾರ್ಗೆಟ್ ನೀಡಿದ ಭಾರತ

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ಕೊಹ್ಲಿ 107 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದರು. 30 ವರ್ಷದ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ 40ನೇ ಶತಕ ಸಿಡಿಸಿದ್ದು, ಈ ಮೂಲಕ ಒನ್’ಡೇ ಕ್ರಿಕೆಟ್’ನಲ್ಲಿ ಸಚಿನ್ ತೆಂಡುಲ್ಕರ್[49] ಬಳಿಕ 40 ಶತಕ ಸಿಡಿಸಿದ ಎರಡನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. 

40ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಹಾಗೂ ಮೊದಲ ಏಕದಿನ ಪಂದ್ಯದ ಹೀರೋ ಮಹೇಂದ್ರ ಸಿಂಗ್ ಧೋನಿ ಶೂನ್ಯ ಸುತ್ತಿದ ಪಿಚ್’ನಲ್ಲೇ ಕೊಹ್ಲಿ ಮೂರಂಕಿ ಮೊತ್ತ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಪ್ರದರ್ಶನ ಕಂಡ ಟ್ವಿಟರಿಗರು ಹೇಳಿದ್ದೇನು..? ನೀವೇ ನೋಡಿ..