ನಾಗ್ಪುರ[ಮಾ.05]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಕೊಹ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನದ 40ನೇ ಶತಕವಾಗಿದೆ.

ಆಸಿಸ್ ವಿರುದ್ಧ ದಿಗ್ಗಜ ನಾಯಕರ ದಾಖಲೆ ಪುಡಿಮಾಡಿದ ಕೊಹ್ಲಿ

ವಿರಾಟ್ ಕೊಹ್ಲಿ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ನೆರವಿನೊಂದಿಗೆ ನೂರು ರನ್ ಪೂರೈಸಿದರು. ಈ ಶತಕದೊಂದಿಗೆ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಳಿಕ 40 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಸಚಿನ್ ತೆಂಡುಲ್ಕರ್ 452 ಇನ್ನಿಂಗ್ಸ್’ಗಳಲ್ಲಿ 49 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೇವಲ 216 ಇನ್ನಿಂಗ್ಸ್’ಗಳಲ್ಲಿ 40ನೇ ಶತಕ ಪೂರೈಸಿದ್ದಾರೆ. 

ಈ ಶತಕದೊಂದಿಗೆ ಏಷ್ಯಾದಲ್ಲಿ ಅತಿಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಏಷ್ಯಾದಲ್ಲಿ ಏಕದಿನ ಹಾಗೂ ಟೆಸ್ಟ್’ನಲ್ಲಿ ಒಟ್ಟು 40 ಶತಕ ಸಿಡಿಸಿದ್ದಾರೆ. ಏಷ್ಯಾದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್[71] ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಕುಮಾರ್ ಸಂಗಕ್ಕರ[45] ಎರಡನೇ ಸ್ಥಾನದಲ್ಲಿದ್ದಾರೆ.