ಟೂರ್ನಿಯುದ್ದಕ್ಕೂ ಅಧಿಕಾರಯುತ ಪ್ರದರ್ಶನ ತೋರಿದ ಕಿರಿಯರ ಟೀಂ ಇಂಡಿಯಾ ಅರ್ಹವಾಗಿಯೇ ಪ್ರಶಸ್ತಿ ಎತ್ತಿ ಹಿಡಿದಿದೆ. ಅಂಡರ್ 19 ಟೀಂ ಇಂಡಿಯಾ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದು ಹೀಗೆ...
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕಿರಿಯರ ಟೀಂ ಇಂಡಿಯಾ ಪಡೆ ಫೈನಲ್'ನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್'ಗಳ ಜಯಭೇರಿ ಬಾರಿಸುವ ಮೂಲಕ 2018ನೇ ಸಾಲಿನ ವಿಶ್ವಕಪ್ ಎತ್ತಿಹಿಡಿದಿದೆ.
ಆಸ್ಟ್ರೇಲಿಯಾ ತಂಡವನ್ನು ಕೇವಲ 216ರನ್'ಗಳಿಗೆ ನಿಯಂತ್ರಿಸಿದ ಪೃಥ್ವಿ ಶಾ ಪಡೆ, ಮನ್ಜೋತ್ ಕಲ್ರಾ ಆಕರ್ಷಕ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಸುಲಭವಾಗಿ ಮಣಿಸಿತು. ಈ ಮೂಲಕ 4ನೇ ಬಾರಿಗೆ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಗೌರವಕ್ಕೆ ಭಾರತ ಪಾತ್ರವಾಯಿತು.
ಟೂರ್ನಿಯುದ್ದಕ್ಕೂ ಅಧಿಕಾರಯುತ ಪ್ರದರ್ಶನ ತೋರಿದ ಕಿರಿಯರ ಟೀಂ ಇಂಡಿಯಾ ಅರ್ಹವಾಗಿಯೇ ಪ್ರಶಸ್ತಿ ಎತ್ತಿ ಹಿಡಿದಿದೆ. ಅಂಡರ್ 19 ಟೀಂ ಇಂಡಿಯಾ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದು ಹೀಗೆ...