Asianet Suvarna News Asianet Suvarna News

ಕೇವಲ 30 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 1 ಕೋಟಿ ರುಪಾಯಿ!

ಸಾಮಾನ್ಯವಾಗಿ ಭಾರತೀಯ ಕಾರ್ಯಕ್ರಮಗಳಿಗೆ ಅತಿಹೆಚ್ಚು ಅಂದರೆ ₹10 ಲಕ್ಷ ನಿಗದಿ ಪಡಿಸಲಾಗಿರುತ್ತದೆ.

TV ad rates rocket ahead of India vs Pakistan final

ಬೆಂಗಳೂರು(ಜೂ.16): ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ರೋಚಕ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಭಾನುವಾರದ ಭಾರತ-ಪಾಕಿಸ್ತಾನ ಫೈನಲ್ ಪಂದ್ಯಕ್ಕೆ ಟಿವಿ ಜಾಹೀರಾತಿನ ದರ ಆಗಸಕ್ಕೇರಿದೆ. ಸಾಮಾನ್ಯ ದರಕ್ಕಿಂತ 10 ಪಟ್ಟು ಹೆಚ್ಚಾಗಿದ್ದು ‘ಸ್ಟಾರ್ ಸ್ಪೋರ್ಟ್ಸ್’ ವಾಹಿನಿಯಲ್ಲಿ 30 ಸೆಕೆಂಡ್‌'ಗಳ ಜಾಹೀರಾತಿಗೆ ಬರೋಬ್ಬರಿ ₹1 ಕೋಟಿಗಳಾಗಲಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಭಾರತೀಯ ಕಾರ್ಯಕ್ರಮಗಳಿಗೆ ಅತಿಹೆಚ್ಚು ಅಂದರೆ ₹10 ಲಕ್ಷ ನಿಗದಿ ಪಡಿಸಲಾಗಿರುತ್ತದೆ. ಆದರೆ ಕೋಟ್ಯಂತರ ಜನ ಪಂದ್ಯ ವೀಕ್ಷಿಸುವುದರಿಂದ ಮೊತ್ತವನ್ನು ದಿಢೀರ್ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios