ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ದಿಢೀರ್ ನಿವೃತ್ತಿ..!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 11, Jul 2018, 10:18 AM IST
Tushar Arothe steps down as Indian women's cricket team coach
Highlights

ತಮ್ಮ ನಿರ್ಧಾರಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ಆಟಗಾರ್ತಿಯರೊಂದಿಗಿನ ಮನಸ್ತಾಪವೇ ರಾಜೀನಾಮೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಮುಂಬೈ[ಜು.11]: ಐಸಿಸಿ ಟಿ20 ವಿಶ್ವಕಪ್‌ಗೆ ಕೇವಲ 5 ತಿಂಗಳು ಬಾಕಿ ಇರುವಾಗ, ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ತುಷಾರ್ ಅರೋಠೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ನಿರ್ಧಾರಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ಆಟಗಾರ್ತಿಯರೊಂದಿಗಿನ ಮನಸ್ತಾಪವೇ ರಾಜೀನಾಮೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋಲುಂಡ ಬಳಿಕ, ಆಟಗಾರ್ತಿಯರು ಸೋಲಿಗೆ ಕೋಚ್ ಕಾರಣ ಎಂದು ದೂರಿದ್ದರು. ಬಿಸಿಸಿಐ ಆಡಳಿತ ಸಮಿತಿಯನ್ನು ಭೇಟಿಯಾಗಿದ್ದ ಕೆಲ ಹಿರಿಯ ಆಟಗಾರ್ತಿಯರು, ತುಷಾರ್ ನಾಯಕಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಿಡುವುದಿಲ್ಲ. ಅಭ್ಯಾಸದ ವೇಳೆ ಅವರಿಂದ ಯಾವುದೇ ಸಲಹೆ-ಸೂಚನೆಗಳು ಸಿಗುತ್ತಿಲ್ಲ ಎಂದು ದೂರು ನೀಡಿದ್ದರು.

ಸೋಮವಾರ ಸಂಜೆ ಬಿಸಿಸಿಐಗೆ ರಾಜೀನಾಮೆ ಪತ್ರ ರವಾನಿಸಿದ ತುಷಾರ್, ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿ, ‘ನನಗೆ ಯಾವ ಆಟಗಾರ್ತಿಯರ ಮೇಲೂ ಬೇಸರವಿಲ್ಲ. ತಂಡಕ್ಕೆ ಶುಭ
ಹಾರೈಸುತ್ತೇನೆ. ಆದರೆ ಕೆಲವರು ತಮ್ಮ ಸೌಕರ್ಯ ವಲಯದಿಂದ ಹೊರ ಬಂದು ತಂಡದ ಯಶಸ್ಸಿಗೆ ದುಡಿಯಬೇಕು’ ಎಂದಿದ್ದಾರೆ. 2017ರ ಏಪ್ರಿಲ್‌ನಲ್ಲಿ ತುಷಾರ್ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು.

loader