ಕ್ರಿಕೆಟ್‌ನಿಂದ ಕಳ್ಳಾಟವನ್ನ ಮುಕ್ತಗೊಳಿಸಲು ಅವಿರತ ಪ್ರಯತ್ನ ನಡೆಯುತ್ತಿದ್ದರೂ, ಫಿಕ್ಸಿಂಗ್ ಮಾತ್ರ ನಿಲ್ಲುತ್ತಿಲ್ಲ. ಇದೀಗ ಅಲ್‌ಜಜೀರಾ ಸ್ಫಾಟ್ ಫಿಕ್ಸಿಂಗ್ ಕುರಿತು ಸ್ಫೋಟಕ ವಿಡಿಯೋ ಬಹಿರಂಗ ಪಡಿಸಿದೆ. 

ನವದೆಹಲಿ(ಅ.22): ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್‌ಜಜೀರಾ ಟೀವಿ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗಗೊಳಿಸಿದೆ. ‘ಕ್ರಿಕೆಟ್ ಮ್ಯಾಚ್ ಫಿಕ್ಸರ್ಸ್‌ ದಿ ಮುನಾವರ್ ಫೈಲ್ಸ್’ ಎಂಬ ಹೆಸರಿನ ರಹಸ್ಯಕಾರ್ಯಾಚರಣೆ ವಿಡಿಯೋವನ್ನು ವಾಹಿನಿಯು ಭಾನುವಾರ ಬಿತ್ತರಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಡಿಯೋದಲ್ಲಿ ಸ್ಪಾಟ್ ಫಿಕ್ಸರ್ ಅನಿಲ್ ಮುನಾವರ್ ಎಂಬಾತ, 2011-12ರ ಅವಧಿಯ 6 ಟೆಸ್ಟ್, 6 ಏಕದಿನ ಮತ್ತು 3 ವಿಶ್ವಕಪ್ ಟಿ20 ಪಂದ್ಯಗಳಲ್ಲಿ ಒಟ್ಟು 25 ಸ್ಪಾಟ್ ಫಿಕ್ಸಿಂಗ್ ಪ್ರಕರಣ ಗಳಿಗೆ ಕಾರಣವಾಗಿದ್ದಾನೆ ಎಂದಿದೆ. 

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಆಟಗಾರರು ಪ್ರಮುಖವಾಗಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿದೆ. ಇದೆ ವೇಳೆ ಐಸಿಸಿ, ಈ ವಿಡಿಯೋಗಳನ್ನು ನೀಡಬೇಕು ಎಂದು ಅಲ್‌ಜಜೀರಾಗೆ ಕೇಳಿದೆ.