Asianet Suvarna News Asianet Suvarna News

Tokyo Olympics ಬಳಿಕ ಮತ್ತೊಂದು ಚಿನ್ನ ಗೆದ್ದ ನೀರಜ್‌ ಚೋಪ್ರಾ

ಒಲಿಂಪಿಕ್ಸ್ ಬಳಿಕ ಮೊದಲ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ
ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್ ಥ್ರೋ
ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್‌ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದ ನೀರಜ್

Tokyo Olympic champion javelin thrower Neeraj Chopra wins gold at Kuortane Games kvn
Author
Bengaluru, First Published Jun 19, 2022, 8:37 AM IST

ಹೆಲ್ಸಿಂಕಿ(ಜೂ.19‌): ಭಾರತದ ತಾರಾ ಜಾವೆಲಿನ್‌ ಪಟು ನೀರಜ್‌ ಚೋಪ್ರಾ (Neeraj Chopra) ಅವರು ಟೋಕಿಯೋ ಒಲಿಂಪಿಕ್ಸ್‌ ಬಳಿಕ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಶನಿವಾರ ಫಿನ್ಲೆಂಡ್‌ನಲ್ಲಿ ನಡೆದ ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಬಂಗಾರ ಗೆದ್ದರು. ಟ್ರೆನಿಡಾಡ್‌ ಆ್ಯಂಡ್‌ ಟೊಬಾಗೋದ ಕೆಶೋರ್ನ್‌ ವಾಲ್ಕೊಟ್‌ ಬೆಳ್ಳಿ, ಗ್ರೆನಡಾದ ಆ್ಯಂಡರ್ಸನ್‌ ಪೀಟ​ರ್ಸ್‌ ಕಂಚಿನ ಪದಕ ಗೆದ್ದರು.

ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತದ ಪರ ಐತಿಹಾಸಿಕ ಚಿನ್ನ ಗೆದ್ದ ಬಳಿಕ ನೀರಜ್‌ಗೆ ಇದು 2ನೇ ಚಿನ್ನ. ಇದಕ್ಕೂ ಮೊದಲು ಇದೇ ವಾರದ ಆರಂಭದಲ್ಲಿ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್‌ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಜೂನ್‌ 30ಕ್ಕೆ ಅವರು ಡೈಮಂಡ್‌ ಲೀಗ್‌ನ ಸ್ಟೋಕ್‌ಹೆಲ್ಮ್‌ ಲೆಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇಂಡೋನೇಷ್ಯಾ ಓಪನ್‌: ಪ್ರಣಯ್‌ಗೆ ಸೋಲು

ಜಕಾರ್ತ: ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಭಿಯಾನ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಅವರು ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ 2 ಬಾರಿ ವಿಶ್ವಚಾಂಪಿಯನ್‌ಶಿಪ್‌ ಕಂಚು ವಿಜೇತ ಚೀನಾದ ಜಾವೊ ಜುನ್‌ ಪೆಂಗ್‌ ವಿರುದ್ಧ 16-21, 15-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಪಂದ್ಯ ಸುಮಾರು 40 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. 2017ರ ಬಳಿಕ 2ನೇ ಬಾರಿ ಸೆಮೀಸ್‌ ಪ್ರವೇಶಿಸಿದ್ದ ಪ್ರಣಯ್‌ಗೆ ಈ ಬಾರಿಯೂ ಫೈನಲ್‌ ತಲುಪಲು ಆಗಲಿಲ್ಲ.

ಭಾರತದ 2 ಬ್ಯಾಡ್ಮಿಂಟನ್‌ ಟೂರ್ನಿಗೆ ದಿನಾಂಕ ಪ್ರಕಟ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌(ಬಿಡಬ್ಲ್ಯುಎಫ್‌) ಶುಕ್ರವಾರ ಭಾರತದ ಎರಡು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗಳ ವೇಳಾಪಟ್ಟಿಪ್ರಕಟಿಸಿದೆ. ಬಿಡಬ್ಲ್ಯುಎಫ್‌ ಕ್ಯಾಲೆಂಡರ್‌ ಪ್ರಕಾರ ಈ ವರ್ಷ ಸೆಪ್ಟಂಬರ್‌ನಲ್ಲಿ ನಾಗ್ಪುರ ಹಾಗೂ ರಾಯ್ಪುರದಲ್ಲಿ ಎರಡು ಟೂರ್ನಿಗಳು ನಡೆಯಲಿವೆ. 

Commonwealth Games : ಮಹಿಳಾ ಟೇಬಲ್ ಟೆನಿಸ್ ತಂಡ ಆಯ್ಕೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್‌

ಮಹಾರಾಷ್ಟ್ರ ಅಂತಾರಾಷ್ಟ್ರೀಯ ಚಾಲೆಂಜ್‌ ಟೂರ್ನಿ ನಾಗ್ಪುರದಲ್ಲಿ ಸೆ.13ರಿಂದ 18ರ ವರೆಗೆ ನಿಗದಿಯಾಗಿದ್ದು, ಛತ್ತೀಸ್‌ಗಡ ಅಂತಾರಾಷ್ಟ್ರೀಯ ಚಾಲೆಂಜ್‌ ಟೂರ್ನಿ ರಾಯ್ಪುರದಲ್ಲಿ ಸೆ.20ರಿಂದ 25ರ ವರೆಗೆ ಆಯೋಜಿಸಲಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಾಲೆಂಜ್‌ ಟೂರ್ನಿ ಹಾಗೂ ಪುಣೆಯಲ್ಲಿ ಜೂನಿಯರ್‌ ಅಂತರರಾಷ್ಟ್ರೀಯ ಟೂರ್ನಿಯನ್ನೂ ನಡೆಸುತ್ತೇವೆ ಎಂದು ಬಿಡಬ್ಲ್ಯುಎಫ್‌ ಮಾಹಿತಿ ನೀಡಿದೆ.

ಟೇಬಲ್‌ ಟೆನಿಸ್‌: ಸತ್ಯನ್‌ಗೆ ಸೋಲು

ನವದೆಹಲಿ: ಭಾರತದ ತಾರಾ ಟೇಬಲ್‌ ಟೆನಿಸ್‌ ಪಟು ಸತ್ಯನ್‌ ಜ್ಞಾನಶೇಖರನ್‌ ಅವರು ಕ್ರೊವೇಷಿಯಾದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.34 ಸತ್ಯನ್‌ ಅವರು ಚೈನೀಸ್‌ ತೈಪೆಯ ಚಿಹ್‌ ಯಾನ್‌ ವಿರುದ್ಧ 7-11, 9-11, 5-11 ಅಂತರದಲ್ಲಿ ಸೋಲನುಭವಿಸಿದರು. ಸತ್ಯನ್‌ ಮೊದಲ ಸುತ್ತಲ್ಲಿ ವಿಶ್ವದ 6ನೇ ರಾರ‍ಯಂಕ್‌ನ ಆಟಗಾರ ಜಾರ್ಜಿಕ್‌ ಡಾರ್ಕೊ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು.

Follow Us:
Download App:
  • android
  • ios